Advertisement

ಬ್ರಿಗೇಡ್‌ ಚಟುವಟಿಕೆ ಇಂದು ಚರ್ಚೆ: ಕೆ.ಎಸ್‌. ಈಶ್ವರಪ್ಪ

12:46 PM Feb 11, 2017 | Team Udayavani |

ದಾವಣಗೆರೆ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯ ಮುಂದಿನ ರೂಪುರೇಷೆ ಬಗ್ಗೆ ಚರ್ಚಿಸಲು ಶನಿವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ತಿಳಿಸಿದರು. 

Advertisement

ನಗರದ ಹೊರವಲಯದ ಸರ್ಕಿಟ್‌ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಯಣ್ಣ ಬ್ರಿಗೇಡ್‌ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಿಗೇಡ್‌ ಸಂಘಟನೆ ಮುಂದುವರಿಸಿಕೊಂಡು ಹೋಗಿ, ರಾಜಕೀಯ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸೋದು ಬೇಡ ಎಂದು ಸೂಚಿಸಿದ್ದಾರೆ.

ಇದೇ ಕಾರಣಕ್ಕೆ ನಾಳೆ ಶಾಸಕರ ಭವನದಲ್ಲಿ ಸಂಘಟನೆಯ ಹಿರಿಯ ನಾಯಕರ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು. ಪಕ್ಷದ ಜಿಲ್ಲಾ ಅಧ್ಯಕ್ಷರ ನೇಮಕ ವಿಷಯದಲ್ಲಿ ಆದ ಗೊಂದಲ ನಿವಾರಣೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮಿತಿಯೊಂದನ್ನು ರಚಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.  ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮುಖಂಡರಾದ ಸಂತೋಷ್‌, ಅರುಣ್‌ಕುಮಾರ್‌ ನೇತೃತ್ವದ ಸಮಿತಿ ಗೊಂದಲ ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ತಮಗಿದೆ.

ಗೋವಾ ಚುನಾವಣೆ ಹಿನ್ನೆಲೆಯಲ್ಲಿ ಸಮಿತಿ ಇನ್ನೂ ಸಭೆ ಸೇರಿಲ್ಲ ಎಂದು ಅವರು ತಿಳಿಸಿದರು. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ 2018ರ ವರೆಗೂ ಅಸ್ತಿತ್ವದಲ್ಲಿ ಇರುವುದು ಅನುಮಾನ ಎಂಬಂತಾಗಿದೆ. ಪಕ್ಷದಲ್ಲಿರುವ ಗುಂಪುಗಾರಿಕೆಯಿಂದಾಗಿ ಯಾವುದೇ ಕ್ಷಣದಲ್ಲಾದರೂ ಚುನಾವಣೆ ನಡೆಯಬಹುದು. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಶ್ರಮಪಟ್ಟರೂ ಗೆಲುವು ಸಿಗಲಿಲ್ಲ.

ಅಲ್ಪಮತದ ಅಂತರದಲ್ಲಿ ಸೋಲು ಅನುಭವಿಸಿದೆವು ಎಂದು ಅವರು ಹೇಳಿದರು. ಅಹಿಂದ ಉದ್ಧಾರ ಇನ್ನೂ ಆಗಿಲ್ಲ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಉದ್ಧಾರದ ಬಗ್ಗೆ ಬರೀ ಮಾತು, ಘೋಷಣೆಯಲ್ಲೇ ಕಾಲ ಕಳೆದಿದೆ. ದಲಿತರ ಉದ್ಧಾರಕ್ಕೆ ಕಳೆದ ಬಜೆಟ್‌ನಲ್ಲಿ 20.66 ಸಾವಿರ ಕೋಟಿ ರೂ. ಮೀಸಲಿಟ್ಟರೂ ಖರ್ಚುಮಾಡಿದ್ದು ಮಾತ್ರ 6,660 ಕೋಟಿ ರೂ. ಮಾತ್ರ.

Advertisement

ಉಳಿದ 14 ಸಾವಿರ ಕೋಟಿ ರೂ. ಹೇಗೆ ಖರ್ಚುಮಾಡುತ್ತಾರೆ ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲಿ ಎಂದು ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದ್ದಾರೆ. ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣದಲ್ಲಿ  ಅನೇಕ ವಿಷಯಗಳನ್ನು ಸರ್ಕಾರ ಪ್ರಸ್ತಾಪಿಸಿದೆ. ಹಿಂದುಳಿದ, ದಲಿತರ ಉದ್ಧಾರಕ್ಕಾಗಿ ಸಾಕಷ್ಟು ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾಗಿ ಹೇಳಿಕೊಂಡಿದೆ. ಆದರೆ, ಇದ್ದ ಅನುದಾನ ಖರ್ಚು ಮಾಡುವಲ್ಲೇ ಸರ್ಕಾರ ವಿಫಲವಾಗಿದೆ. 

ಇದರಿಂದಲೇ ಕಾಂಗ್ರೆಸ್‌ಗೆ ಈ ವರ್ಗಗಳ ಬಗ್ಗೆ ಇರುವ ಕಾಳಜಿ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದು ಅವರು ಲೇವಡಿ ಮಾಡಿದರು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಜಿಪಂ ಸದಸ್ಯರಾದ ಗೀತಾ ಗಂಗಾನಾಯ್ಕ, ಶೈಲಜಾ ಬಸವರಾಜ್‌, ನಟರಾಜ, ತಾಪಂ ಅಧ್ಯಕ್ಷೆ ಮಮತ ಮಲ್ಲೇಶಪ್ಪ, ಮುಖಂಡರಾದ ಎಚ್‌.ಎಸ್‌. ನಾಗರಾಜ್‌, ಧನಂಜಯ ಕಡ್ಲೆàಬಾಳು, ಎಚ್‌.ಎನ್‌. ಗುರುನಾಥ, ಬಿ.ಎಸ್‌. ಜಗದೀಶ್‌, ಎ.ಬಿ. ಹನುಮಂತಪ್ಪ, ಎಚ್‌.ಎಂ. ರುದ್ರಮುನಿಸ್ವಾಮಿ, ಶಾಮನೂರು ಲಿಂಗರಾಜ್‌, ಪಿ.ಎಸ್‌. ಜಯಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next