Advertisement
ತುಮಕೂರು ಮೇಲ್ಸೇತುವೆ ಮೇಲೆ ವಾಹನ ಸಂಚಾರ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತವಾಗಿದೆ.ಈ ಮಧ್ಯೆ ಗೊರಗುಂಟೆಪಾಳ್ಯದ ಎಂಇಎಸ್ ಮೇಲ್ಸೇತುವೆ ಹಾಗೂ ಜಾಲಹಳ್ಳಿ ಬಳಿಯ ಐಒಸಿ ಜಂಕ್ಷನ್‌ನಲ್ಲಿಯ ಮೇಲ್ಸೇತುವೆಯಲ್ಲಿ ತಾಂತ್ರಿಕಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಇದರ ಪರಿಣಾಮ ಬೆಂಗಳೂರಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
Related Articles
Advertisement
“ಮೇಲ್ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರಂಭದಿಂದಲೂ ಹೇಳುತ್ತಿದ್ದೇನೆ. ಆದರೆ, ಸಂಬಂಧಪಟ್ಟ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಕಳಪೆ ಕಾಮಗಾರಿಯಿಂದ ಸಂಭವಿಸುವ ಸಾವು-ನೋವುಗಳಿಗೆಯಾರು ಹೊಣೆ. ಆದ್ದರಿಂದ ಆದ್ದರಿಂದ ಮೇಲ್ಸೇತುವೆ ಗಳ ಭದ್ರತೆ ಪರಿಶೀಲನೆಗೆ ತಾಂತ್ರಿಕ ಸಮಿತಿ ರಚನೆ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನಗಳು ಯಾವುದೇ ಆಗಿರಲಿ. ಆದರೆ, ನಿರ್ವಹಣೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯ ಸಿರ್ಸಿ ಫ್ಲೈಓವರ್, ಸುಮ್ಮನಹಳ್ಳಿ ಮೇಲ್ಸೇತುವೆ ಸೇರಿದಂತೆ ಹಲವು ಮೇಲ್ಸೇತುವೆಗಳು ದುರಸ್ತಿಯಾಗಿವೆ. ಈ ಸೇತುವೆಗಳನ್ನು ನಿರ್ಮಿಸಿರುವ ಕಂಪನಿಗಳ ಮೇಲೆ ಯಾವುದೇ ಕ್ರಮ ಜರುಗಿಸದೆ ಸರ್ಕಾರವೇ ಕಳಪೆ ಕಾಮಗಾರಿಗಳಿಗೆ ಬೆಂಬಲ ನೀಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಜಾಲಹಳ್ಳಿ ರೈಲ್ವೆ ಸೇತುವೆ ಶಿಥಿಲ ನಗರ ವ್ಯಾಪ್ತಿಯಲ್ಲಿರುವ ಯಾವುದೇ ಸೇತುವೆಗಳು ಶಿಥಿಲಗೊಂಡಿಲ್ಲ. ಆದರೆ, ಗೊರಗುಂಟೆಪಾಳ್ಯದ ಎಂಇಎಸ್ ಮೇಲ್ಸೇತುವೆ ಮತ್ತು ಜಾಲಹಳ್ಳಿಯ ಐಒಸಿ ಜಂಕ್ಷನ್‌ನಲ್ಲಿ ರೈಲ್ವೆ ಇಲಾಖೆ ನಿರ್ಮಿಸಿರುವ ಮೇಲ್ಸೇತುವೆ ಯಲ್ಲಿ ತಾಂತ್ರಿಕವಾಗಿ ಕೆಲವು ಸಮಸ್ಯೆಗಳಿವೆ. ಈ ಸಂಬಂಧ ರೈಲ್ವೆ ಇಲಾಖೆ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಮೂಲಸೌಕರ್ಯ) ಪ್ರಹ್ಲಾದ್ ತಿಳಿಸಿದರು.
ದಶಪಥಕ್ಕೂ ಇದೇ ಮಾದರಿ ಸೇತುವೆ? : ತುಮಕೂರು ಮೇಲ್ಸೇತುವೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಾಗಿರುವ ಹೆಬ್ಟಾಳ ಮೇಲ್ಸೇತುವೆಯನ್ನು “ಎಕ್ಸಟರ್ನಲ್‌ಪೋಸ್ಟ್ ಟೆನ್ಷನಿಂಗ್ ಸಿಸ್ಟ್ಂ’ ತಂತ್ರಜ್ಞಾನ ಬಳಸಿನಿರ್ಮಿಸಲಾಗಿದೆ. ಇದೀಗ ಬೆಂಗಳೂರು-ಮೈಸೂರು ದಶಪಥ ರಸ್ತೆ ಕೂಡ ಇದೇ ವಿನ್ಯಾಸದಲ್ಲಿ ರೂಪುಗೊಳ್ಳುತ್ತಿದೆ. ಅಲ್ಲಿನ ಮೇಲ್ಸೇತುವೆ, ಸೇತುವೆ, ಅಂಡರ್‌ಪಾಸ್‌ಗೆ ಇದೇ ತಂತ್ರಜ್ಞಾನ ಬಳಸಲಾಗಿದೆ ಎಂದು ತಜ್ಞರೊಬ್ಬರು ತಿಳಿಸಿದರು
ನಗರದ ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲವೂ ಸುಸ್ಥಿತಿಯಲ್ಲಿದ್ದು, ಜನರು ಆತಂಕಪಡುವ ಆಗತ್ಯವಿಲ್ಲ. ಸವಾರರು ನಿರ್ಭಯದಿಂದ ವಾಹನಗಳು ಸಂಚರಿಸಬಹುದು. – ಬಿ.ಎಸ್. ಪ್ರಹ್ಲಾದ್,ಬಿಬಿಎಂಪಿ ಮುಖ್ಯ ಎಂಜಿನಿಯರ್
– ಎನ್.ಎಲ್.ಶಿವಮಾದು