Advertisement
ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪ್ರವಾಹದ ಪ್ರತಾಪಕ್ಕೆ ಕಿಂಡಿ ಅಣೆಕಟ್ಟು, ಸೇತುವೆಗಳು ಜಲಸಮಾಧಿಯಾಗಿತ್ತು. ಇದಕ್ಕೆ ತಾಲೂಕಿನ ತೂಗುಸೇತುವೆಗಳು ಹೊರತಾಗಿಲ್ಲ. ಸುಮಾರು 20 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮುಂಡಾಜೆ ಗ್ರಾ.ಪಂ.ಗೆ ಒಳಪಟ್ಟಂತೆ ದೂಂಬೆಟ್ಟು ಬಳಿ ಮೃತ್ಯುಂಜಯ ಹೊಳೆಗೆ ನಿರ್ಮಿಸಿದ ತೂಗು ಸೇತುವೆ ಭವಿಷ್ಯವೂ ನಿರ್ವಹಣೆಯಿಲ್ಲದೆ ತೂಗುಯ್ನಾಲೆಯಲ್ಲಿದೆ.
Related Articles
Advertisement
ತಾಲೂಕಿನಲ್ಲಿ ಶಿಶಿಲ, ಮುಗೇರಡ್ಕ, ದೂಂಬೆಟ್ಟು ಸೇರಿದಂತೆ ಹಲವೆಡೆ ತೂಗು ಸೇತುವೆಗಳಿದ್ದವು. ಮುಗೇರಡ್ಕ ಬಳಿ ನೇತ್ರಾವತಿಗೆ ಅಡ್ಡಲಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿ ಹೋಗಿತ್ತು. ತಾತ್ಕಾಲಿಕವಾಗಿ ನದಿ ದಾಟಲು ಶಾಸಕ ಹರೀಶ್ ಪೂಂಜ ನಾಡದೋಣಿ ಒದಗಿಸಿದ್ದರು. ಇದೇ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿತ್ತಾದರೂ ಪ್ರಗತಿ ಕಂಡಿಲ್ಲ. ಶಿಶಿಲ ತೂಗು ಸೇತುವೆ ದುರಸ್ತಿ ನಡೆಸಲಾಗಿದೆ. ಪ್ರಸಕ್ತ ದೂಂಬೆಟ್ಟು ಪರಿಸರದಲ್ಲಿ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿಮಾರ್ಣಕ್ಕೆ ಬೇಡಿಕೆ ಇದ್ದು, ಸೇತುವೆ ನಿರ್ಮಾಣವಾದಲ್ಲಿ ಸಹಕಾರಿಯಾಗಲಿದೆ.
ಕಾಲನಿ ಅಭಿವೃದ್ಧಿಗೂ ಪ್ರಯೋಜನ :
ದೂಂಬೆಟ್ಟು ಸಮೀಪ ಸುಮಾರು 20ರಷ್ಟು ಪರಿಶಿಷ್ಟ ವರ್ಗಕ್ಕೆ ಸೇರಿದ ಮನೆಗಳಿವೆ. ಕಾನರ್ಪ, ಕಡಿರುದ್ಯಾವರ, ಮುಂಡಾಜೆಗೆ ಅಗತ್ಯ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ಕೃಷಿಕರಿಗೆ, ಹೈನುಗಾರರಿಗೆ, ಗೊಬ್ಬರ ಸಾಗಾಟಕ್ಕೆ, ಆರೋಗ್ಯ ಕೇಂದ್ರಕ್ಕೆ ತೆರಳಲು, ಶಾಲಾ ಮಕ್ಕಳಿಗೆ, ಕೂಲಿ ಕೆಲಸಕ್ಕೆ ತೆರಳಲು ಅಗತ್ಯ ಸಂಪರ್ಕ ರಸ್ತೆ ಯಾಗಿದೆ. ಕಡಿರುದ್ಯಾವರ ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರವಿದೆ. ಸೇತುವೆ ಸಂಪರ್ಕಿಸುವ ರಸ್ತೆಗೆ 25 ಲಕ್ಷ ರೂ.ನ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಉಳಿದಂತೆ 1 ಕಿ.ಮೀ. ನಷ್ಟು ಕಾಂಕ್ರೀಟ್ ಆಗಬೇಕಿದೆ. ತೂಗು ಸೇತುವೆ ಸಂಪರ್ಕ ರಸ್ತೆಯು ದುರಸ್ತಿ ನಡೆಸದಿರುವುದರಿಂದ ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದೆ.
ಪ್ರವಾಹದಲ್ಲಿ ಹಾನಿಗೀಡಾದ ತಾಲೂಕಿನ ತೂಗು ಸೇತುವೆಗಳ ದುರಸಿ ¤ಕಾರ್ಯ ಒಂದೊಮ್ಮೆ ನಡೆದಿದೆ. ದೂಂಬೆಟ್ಟು ಸೇತುವೆ ಪರಿಶೀಲನೆ ನಡೆಸಿ ಸೇತುವೆ ಅವಶ್ಯ ಕಂಡಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಮುಗೇರಡ್ಕದಲ್ಲಿ ಸೇತುವೆ ಜತೆಗೆ ನೀರಿನ ಕೊರತೆ ನೀಗಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.-ಹರೀಶ್ ಪೂಂಜ, ಶಾಸಕರು
20 ವರ್ಷಗಳ ಹಿಂದೆ ನಿರ್ಮಾಣವಾದ ತೂಗುಸೇತುವೆ ಅಪಾಯದಲ್ಲಿದೆ. ಹೀಗಾಗಿ ನೂತನ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಕೃಷಿ ನೀರಿಗೆ ಅವಶ್ಯ ನೀರು ಲಭ್ಯವಾಗುವುದರೊಂದಿಗೆ ಕೃಷಿಕರಿಗೆ ಅಗತ್ಯ ಸಂಚಾರಕ್ಕೆ ಅನುಕೂಲವಾಗಲಿದೆ. -ಶಶಿಧರ್ ಎಸ್. ಕಾಡಿಲ್ಕರ್, ದೂಂಬೆಟ್ಟು, ಕೇತಕ್ ಕುಂಜ್ ನಿವಾಸಿ
ಚೈತ್ರೇಶ್ ಇಳಂತಿಲ