Advertisement
2000ನೇ ಇಸವಿಯ ಸುಮಾರಿಗೆ ಈ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಯ ತಳಭಾಗಕ್ಕೆ ಪೈಪ್ ಅಳವಡಿ ಸಿರುವುದರಿಂದ ನೀರು ಸರಾಗವಾಗಿ ಹರಿಯು ತ್ತಿರಲಿಲ್ಲ, ಹಾಗಾಗಿ ಸ್ಥಳೀಯರು ಆಗ ಇದಕ್ಕೆ ಪ್ರತಿಭಟಿಸಿದ್ದರು. ಇಲ್ಲಿ ಪ್ರತಿ ಮಳೆಗಾಲದಲ್ಲೂ ಕಸಕಡ್ಡಿ ಮರದ ಗೆಲ್ಲು, ಮಡಲು ಇತ್ಯಾದಿ ಬಂದು ಪೈಪ್‌ನಲ್ಲಿ ಸಿಲುಕಿ ಹಾಕಿಕೊಂಡು ಸಮಸ್ಯೆಯಾಗುತ್ತಿತ್ತು. ಅದನ್ನು ಸ್ಥಳೀಯರೇ ತೆರವು ಮಾಡುತ್ತಿದ್ದರು.
ಈಚೆಗಷ್ಟೇ ಇದೇ ರೀತಿ ಕಸ ಸಿಲುಕಿದ್ದು, ತೆರವು ಮಾಡಲು ಬುಲ್‌ಡೋಜರ್ ತರಲಾಗಿತ್ತು. ಅದನ್ನು ಬಳಸಿ ಕಸ ವಿಲೇವಾರಿ ಮಾಡುವ ವೇಳೆ ಸೇತುವೆಗೂ ಹಾನಿಯಾಗಿದೆ. ಇದರಿಂದ ಸೇತುವೆ ಬದಿಯ ತಡೆ ಬಹುತೇಕ ಕುಸಿಯುವ ಹಂತ ತಲಪಿದೆ. ತಡೆಯಿಲ್ಲದೆ ಸೇತುವೆ ಅಪಾಯಕಾರಿಯಾಗುವ ಸಾಧ್ಯತೆ ಇದೆ, ಹಾಗಾಗಿ ಸೇತುವೆಯನ್ನು ವ್ಯವಸ್ಥಿತವಾಗಿ ಮರುನಿರ್ಮಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.