ಪೆರ್ಲ: ಅನುವತ್ತಡ್ಕ-ಇಳಂತೋಡಿ-ಕುತ್ತಾಜೆ- ವಾಣೀನಗರ ಸಂಪರ್ಕ ರಸ್ತೆಯಲ್ಲಿರುವ ಇಳಂತೋಡಿ ಸೇತುವೆ ನಿರ್ಮಾಣ ಕಾರ್ಯವನ್ನು ಶೀಘ್ರ ಪ್ರಾರಂಭಿವಂತೆ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ ಅವರ ಮನವಿ ಮೇರೆಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಇಲ್ಲಿರುವ ಹಲವಾರು ವರ್ಷಗಳ ಹಿಂದಿನ ಕಾಲು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ. ವಾಣೀನಗರ ಶಾಲೆ, ಪುತ್ತೂರು, ಬೆಟ್ಟಂಪಾಡಿ, ಪೆರ್ಲ, ಬದಿಯಡ್ಕ, ಕಾಸರಗೋಡು ಮೊದಲಾದ ಕಡೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಉದ್ಯೋಗ ನಿಮಿತ್ತ ತೆರಳುವವರು ಭಯದಿಂದಲೇ ಸೇತುವೆಯನ್ನು ದಾಟಬೇಕಿದೆ.
ಹೊಸ ಸೇತುವೆ ನಿರ್ಮಾಣಕ್ಕೆ ಕಾಸರಗೋಡು ಡೆವಲಪ್‌ಮೆಂಟ್ ಪ್ಯಾಕೇಜ್‌ನಲ್ಲಿ ಅನುದಾನ ಮಂಜೂರಾಗಿತ್ತು. ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿ.ಪಂ. ಸದಸ್ಯೆ ಪುಷ್ಪಾ ಅಮೆಕ್ಕಳ, ವಾರ್ಡ್ ಸದಸ್ಯೆ ಶಶಿಕಲಾ ವೈ., ಬಿಜೆಪಿ ನೇತಾರ ಗಣಪತಿ ಭಟ್, ರಾಧಾಕೃಷ್ಣ ಭಟ್ ಪತ್ತಡ್ಕ, ಸುಮಿತ್ ರಾಜ್, ಜಗದೀಶ್ ಕುತ್ತಾಜೆ, ಸುಬ್ಬ ಪಾಟಾಳಿ ಕುತ್ತಾಜೆ ತಂಡದಲ್ಲಿದ್ದರು.