Advertisement

ಉಳಿಯ ಸೇತುವೆಗೆ ಕಿಡಿಗೇಡಿಗಳಿಂದ ಹಾನಿ​​​​​​​

12:30 AM Feb 03, 2019 | Team Udayavani |

ಉಳ್ಳಾಲ: ನೇತ್ರಾವತಿ ತಟದ ಪಾವೂರು ಉಳಿಯ ದ್ವೀಪವನ್ನು ಮಂಗಳೂರಿಗೆ ಸಂಪರ್ಕಿಸುವ ಅಡ್ಯಾರ್‌ ಬಳಿಯ ಸೇತುವೆ ಉದ್ಘಾಟನೆಯಾಗಿ ವಾರ ಕಳೆಯುವುದರೊಳಗೆ ಅದಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. 

Advertisement

18 ಲಕ್ಷ ರೂ. ವೆಚ್ಚದಲ್ಲಿ  ಸ್ಥಳೀಯ ಚರ್ಚ್‌ನ ಧರ್ಮಗುರುವಿನ ನೇತೃತ್ವ ದಲ್ಲಿ ದಾನಿಗಳ ನೆರವಿನಿಂದ ಸೇತುವೆ ನಿರ್ಮಿಸಲಾಗಿತ್ತು.

ಸೇತುವೆಯಲ್ಲಿ ನಡೆದುಕೊಂಡು ಹೋಗಲು ಹಾಕಿದ್ದ ಮರದ ಹಲಗೆ ಗಳನ್ನು ಕಿಡಿಗೇಡಿಗಳು ನದಿಗೆ ಎಸೆದಿದ್ದು ಕಬ್ಬಿಣದ ರಾಡ್‌ಗಳಿಗೂ ಹಾನಿ ಮಾಡಿದ್ದಾರೆ. ಜತೆಗೆ ಉಳಿಯ ನಿವಾಸಿಗಳು ಅಡ್ಯಾರ್‌ ಬಳಿ ನೇತ್ರಾವತಿ ತಟದಲ್ಲಿ ನಿಲ್ಲಿಸಿದ್ದ ಒಂದು ರಿಕ್ಷಾ, ಮೂರು ಮೋಟಾರ್‌ ಸೈಕಲ್‌ಗ‌ಳಿಗೆ ಹಾನಿ ಮಾಡಿದ್ದಾರೆ.

ಮರಳು ಮಾಫಿಯಾದವರ ಕೃತ್ಯ? 
ಅಡ್ಯಾರ್‌, ವಳಚ್ಚಿಲ್‌ ಸೇರಿದಂತೆ ಈ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಆರಂಭದಲ್ಲಿ ಇದಕ್ಕೆ ಸ್ಥಳೀಯರು ಅಡ್ಡಿ ಮಾಡದಿದ್ದರೂ ಬಳಿಕ ನದಿ ಆಳವಾದ್ದರಿಂದ ಆಕ್ಷೇಪವೆ ತ್ತಿದ್ದರು. ಈ ಕಾರಣ ಖಾಸಗಿ ಕಂಪೆನಿ ಯೊಂದು ಖಾಸಗಿ ರಸ್ತೆಯನ್ನು ಸ್ಥಳೀಯರಿಗೆ ಬಂದ್‌ ಮಾಡಿತ್ತು. 

ಬಳಿಕ ಸ್ಥಳೀಯರು ಬೇರೆ ದಾರಿಯಲ್ಲಿ ಹೋಗಿ ದೋಣಿ ಬಳಸಿ ದಾಟುತ್ತಿದ್ದರು. ಈಗ ಸೇತುವೆಯಿಂದಾಗಿ ಮರಳು ಗಾರಿಕೆಯವರಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ. ಅಲ್ಲದೆ ವಾರದ ಹಿಂದೆ ಮರಳುಗಾರಿಕೆ ನಡೆಸುತ್ತಿದ್ದ ಎರಡು ದೋಣಿಗಳನ್ನು ಸ್ಥಳೀಯರು ಹಿಡಿದಿಟ್ಟಿದ್ದು, ಬಳಿಕ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. 
 
ಸಚಿವ ಖಾದರ್‌ ಖಂಡನೆ 
ಸೇತುವೆ ಹಾನಿಗೊಳಗಾದ ಪ್ರದೇಶಕ್ಕೆ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಭೇಟಿ ನೀಡಿ ದುಷ್ಕರ್ಮಿಗಳ ಕೃತ್ಯ ಖಂಡಿಸಿದ್ದಾರೆ. ಸೇತುವೆ ಹಾನಿಗೊಳಿಸಿದವರನ್ನು ಬಂಧಿಸಲು ವಿಶೇಷ ತಂಡ ರಚನೆಗೆ, ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲು ಸೂಚಿಸಿದ್ದಾರೆ. ಈ ಬಗ್ಗೆ ಮುಂಜಾಗ್ರತೆಗಾಗಿ ಸಭೆಯೊಂದನ್ನೂ ರವಿವಾರ ಕರೆದಿದ್ದಾರೆ. 

Advertisement

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ. ಆರ್‌. ಸುರೇಶ್‌, ಎಸಿಪಿ ರಾಮರಾವ್‌ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next