Advertisement

ಕೋಲ್ಕತಾ :ವಾಹನಗಳು ಚಲಿಸುತ್ತಿರುವಾಗಲೇ ಕುಸಿದು ಬಿದ್ದ ಮೇಲ್ಸೇತುವೆ 

05:31 PM Sep 04, 2018 | Team Udayavani |

ಕೋಲ್ಕತಾ: ನಗರದ ದಕ್ಷಿಣ ಭಾಗದ ಮಾಂಝೇರ್‌ಹಾಟ್‌ ಎಂಬಲ್ಲಿ  ಫ್ಲೈಓವರ್‌ ಒಂದು ವಾಹನಗಳು ಚಲಿಸುತ್ತಿರುವಾಗಲೇ ಕುಸಿದು ರೈಲು ಹಳಿಯ ಮೇಲೆ ಬಿದ್ದ ಘಟನೆ ಮಂಗಳವಾರ ಸಂಜೆ ನಡೆದಿದೆ. 

Advertisement

ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪ್ರಾಥಮಿಕ ವರದಿಯಂತೆ 6 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಅಗ್ನಿ ಶಾಮಕ ದಳದ ಸಿಬಂದಿಗಳು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next