Advertisement
2 ದಿನಗಳ ಹಿಂದೆ ಕುಸಿದ ಕಾಳಿ ನದಿಯ ಹಳೆಯ ಸೇತುವೆಯನ್ನು ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಐಆರ್‌ಬಿ ಕಂಪೆನಿ ಅಧಿಕಾರಿಗಳ ಜತೆ ವೀಕ್ಷಿಸಿ ಅವರು ಮಾತನಾಡಿದರು. ಬಾಕಿ ಇರುವ ಮುಕ್ಕಾಲು ಭಾಗ ಯಾವಾಗ ಬೇಕಾದರೂ ಕುಸಿಯಬಹುದು. ಹಾಗಾಗಿ ಸೇತುವೆಯ ಉಳಿದ ಅವಶೇಷ ಹಾಗೂ ನದಿಗೆ ಬಿದ್ದ ಸ್ಲಾಬ್ ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ನಡುವೆ ಮುರಿದು ಬಿದ್ದ ಸೇತುವೆ ಪಕ್ಕದಲ್ಲೇ ನಿರ್ಮಾಣವಾಗಿರುವ ಹೊಸ ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆ ಮೇರೆಗೆ ಐಆರ್‌ಬಿ ಕಂಪನಿ ಅಧಿಕಾರಿ ಹರಿಕೃಷ್ಣ ಜಿಲ್ಲಾಧಿಕಾರಿಗೆ ಪತ್ರ ಬರೆದು, ಭಾರೀ ವಾಹನಗಳನ್ನು ಪೊಲೀಸರ ಕಣ್ಗಾವಲಿನಲ್ಲಿ ಬಿಡಲು ಅಡ್ಡಿಯಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.