Advertisement

Bridge: ಕುಳಗೇರಿ – ಆರಗ ಗೇಟ್ ಸಂಪರ್ಕ ಸೇತುವೆ ಕುಸಿತ: ಭಾರಿ ಮಳೆಗೆ ರಾಮ ಮಂಟಪ ಮುಳುಗಡೆ

02:55 PM Jul 30, 2024 | Team Udayavani |

ತೀರ್ಥಹಳ್ಳಿ : ಮರಳ್ಳಿ, ಕುಳಗೇರಿಯಿಂದ ಆರಗ ಗೇಟ್ ಗೆ ಸಂಪರ್ಕ ಮಾಡುವ ಸೇತುವೆ ಕುಸಿತಗೊಂಡಿದ್ದು ವಾಹನ ಸಂಚಾರ ಹಾಗೂ ಸೇತುವೆ ಮೇಲಿನ ಓಡಾಟಕ್ಕೆ ತೊಂದರೆ ಆಗಿದೆ.

Advertisement

ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸರಳ ಗ್ರಾಮದ ಕುಳಗೇರಿ, ಮರಳ್ಳಿ ಭಾಗದ ಜನರು ಸಂಕಷ್ಟ ಎದುರಿಸುವಂತಾಗಿದೆ. ನಿನ್ನೆ ಸಂಜೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಪುಷ್ಯ ಮಳೆಯ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಇಂದು ಬೆಳಗ್ಗೆ ಅದೇ ಸೇತುವೆ ಮೇಲೆ 15 ಕ್ಕೂ ಹೆಚ್ಚು ಮರಳ್ಳಿ ಕುಳಗೇರಿ ಗ್ರಾಮದ ಮಕ್ಕಳು ಶಾಲೆಗಳಿಗೆ ಹೋಗಿದ್ದು ಈಗ ಸೇತುವೆ ಕುಸಿದಿರುವುದರಿಂದ ಮಕ್ಕಳು ವಾಪಾಸ್ ಬರಲು ಪರದಾಟ ನಡೆಸಬೇಕಿದೆ. ಪರ್ಯಾಯವಾಗಿ ಮರಳ್ಳಿ, ಜಯಪುರ ಮಾರ್ಗದಲ್ಲಿ ಸುತ್ತಾಟ ನಡೆಸಿ ಕುಳಗೇರಿ ಗ್ರಾಮಕ್ಕೆ ಬರಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಆ ಮಾರ್ಗದಲ್ಲೂ ಅಕೇಶಿಯಾ ಮರಗಳು ಬಿದ್ದಿದ್ದು ಪೋಷಕರು ಭಯ ಪಡುವಂತಾಗಿದೆ.

ಸೇತುವೆ ಕುಸಿದ ಸ್ಥಳಕ್ಕೆ ಪಿಡಬ್ಲ್ಯೂಡಿ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕಿದೆ ಹಾಗೂ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.

ಐತಿಹಾಸಿಕ ರಾಮ ಮಂಟಪ ಮುಳುಗಡೆ
ತೀರ್ಥಹಳ್ಳಿ : ಪುಷ್ಯ ಮಳೆಯ ಅಬ್ಬರಕ್ಕೆ ತುಂಗಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಐತಿಹಾಸಿಕ ರಾಮಮಂಟಪ ಮುಳುಗಡೆ ಆಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದ ನೀರು ಹೆಚ್ಚಾಗುವ ಸಾಧ್ಯತೆ ಇದೆ.

Advertisement

ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ಈಗಾಗಲೇ ಮುನ್ನೆಚ್ಚರಿಕೆಯನ್ನು ನೀಡಲಾಗಿದ್ದು ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶವಾದ ಸ್ಥಳಗಳಿಗೆ ಅಧಿಕಾರಿಗಳು ಕಳುಹಿಸಬೇಕಿದೆ.

ತಲೆಕೆಳಗಾದ ಪ್ರತೀತಿ
ಪ್ರತಿಯೊಂದು ಬಾರಿ ಬಾಗಿನ ಬಿಟ್ಟ ನಂತರ ಮಳೆ ಕಡಿಮೆಯಾಗಿ ನದಿಯ ನೀರಿನ ಮಟ್ಟ ಕೂಡ ಕಡಿಮೆ ಆಗುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಬಾರಿ ಆ ಪ್ರತೀತಿ ತಲೆ ಕೆಳಗಾಗಿದೆ. ಅದರಲ್ಲೂ ಈ ಬಾರಿ ನಾಲ್ಕು ಬಾರಿ ತುಂಗಾ ನದಿಗೆ ಬಾಗಿನ ಅರ್ಪಿಸಲಾಗಿತ್ತು. ಆದರೂ ಬಾಗಿನ ಅರ್ಪಿಸಿದ ನಂತರ ರಾಮಮಂಟಪ ಮುಳುಗಿ ಹೊಸ ಇತಿಹಾಸ ಬರೆದಿದೆ.

ಇದನ್ನೂ ಓದಿ: Landslide: ಶಿರಾಡಿ ಘಾಟಿಯಲ್ಲಿ ಭೂಕುಸಿತ… ಸಂಚಾರ ಬಂದ್, ಕೆಸರಿನಲ್ಲಿ ಹೂತುಹೋದ ವಾಹನಗಳು

Advertisement

Udayavani is now on Telegram. Click here to join our channel and stay updated with the latest news.

Next