Advertisement

ಹೃದಯಾಘಾತ: ಮಗಳ ಮೆಹೆಂದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗಲೇ ಕುಸಿದು ಬಿದ್ದು ತಂದೆ ಮೃತ್ಯು

10:59 AM Dec 13, 2022 | Team Udayavani |

ಉತ್ತರಖಂಡ್: ಸಂಭ್ರಮದಲ್ಲಿರುವಾಗಲೇ ಹಠಾತ್‌ ಹೃದಯಾಘಾತಗಳು ಸಂಭವಿಸಿ ಕುಸಿದು ಬಿದ್ದು ಮೃತಪಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಇಂಥದ್ದೇ ಮತ್ತೊಂದು ಘಟನೆ ಉತ್ತರಾಖಂಡ್‌ ನ ಅಲ್ಮೋರಾದಲ್ಲಿ ಭಾನುವಾರ (ಡಿ.11 ರಂದು) ನಡೆದಿದೆ.

Advertisement

ಇದನ್ನೂ ಓದಿ:ಮುಧೋಳದಲ್ಲಿ ದೆಹಲಿ ಮಾದರಿಯ ಕೊಲೆ: ತಂದೆಯ ದೇಹವನ್ನು ತುಂಡು ಮಾಡಿ ಕೊಳವೆ ಬಾವಿಗೆಸೆದ ಮಗ

ತನ್ನ ಮಗಳ ಮೆಹೆಂದಿಯಲ್ಲಿ ಸಂಬಂಧಿಕರೊಂದಿಗೆ ವಧುವಿನ ತಂದೆ ಸಂತಸದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡು ಕುಟುಂಬಸ್ಥರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ವೈದ್ಯರು ಹೇಳಿದ್ದಾರೆ.

ಕೆಲವು ಕುಟುಂಬಸ್ಥರು ಮದುವೆ ನಡೆಯಲಿದ್ದ ಹಲ್ದ್ವಾನಿ ಪ್ರದೇಶಕ್ಕೆ ತೆರಳಿದ ಬಳಿಕ ಈ ಘಟನೆ ನಡೆದಿದೆ. ಇದಾದ ಬಳಿಕ ತಂದೆಯ ನಿಧನದ ನಂತರ ಮದುವೆ ಸಮಾರಂಭ ಸರಳವಾಗಿ ನೆರವೇರಿದೆ. ಸೋದರ ಮಾವ ಕನ್ಯದಾನವನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next