ಲಕ್ನೋ: ವಧುವಿನ ಧಿರಿಸನ್ನು ಹಾಕಿಕೊಂಡು ಯುವತಿಯೊಬ್ಬಳು ಕಾರಿನ ಬಾನೆಟ್ ಮೇಲೆ ಕೂತು ರೀಲ್ಸ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಪ್ರಯೋಗ್ ರಾಜ್ ನಲ್ಲಿ ಈ ಘಟನೆ ನಡೆದಿದೆ. ಅಲ್ಲಾಪುರ ಪ್ರದೇಶದ ವರ್ಣಿಕಾ ಎನ್ನುವ ಯುವತಿ ವಧುವಿನ ಧಿರಿಸನ್ನು ಹಾಕಿಕೊಂಡು ಚಲಿಸುತ್ತಿರುವ ದುಬಾರಿ ಕಾರಿನ ಬಾನೆಟ್ ಮೇಲೆ ಕೂತು ರೀಲ್ಸ್ ಮಾಡಿದ್ದಾರೆ.
ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಚಿತ್ರೀಕರಿಸಲಾದ ಈ ರೀಲ್ಸ್ ಕ್ಲಿಪ್ ನ್ನು ಸೋಶಿಯಲ್ ಮೀಡಿಯಾದಲ್ಲಿ ವರ್ಣಿಕಾ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಗಮನಕ್ಕೆ ಬಂದಿದೆ.
ಇದನ್ನೂ ಓದಿ: CSK ತಂಡದಲ್ಲಿ ಎಲ್ಲವೂ ಸರಿಯಿಲ್ಲ; ಧೋನಿ ಜತೆ ಜಗಳ: ‘ಕರ್ಮ ನೋಡಿಕೊಳ್ಳುತ್ತದೆ’ ಎಂದ ಜಡ್ಡು
ಧರ್ನಾ ಸ್ಥಳ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅಮಿತ್ ಸಿಂಗ್ ಅವರು ಈ ಕುರಿತ ತನಿಖೆ ನಡೆಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ 16,500 ರೂ.ವಿನ ಚಲನ್ ನ್ನು ಜಾರಿ ಮಾಡಿದ್ದಾರೆ.
ಈ ಹಿಂದೆಯೂ ವಧುವಿನ ಧಿರಿಸನ್ನು ಹಾಕಿಕೊಂಡು ಸ್ಕೂಟರ್ ನಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ 1500 ರೂ.ವಿನ ಚಲನ್ ಸೇರಿದಂತೆ ಎರಡೂ ಪ್ರಕರಣಕ್ಕೆ ಸೇರಿ ಪೊಲೀಸರು 16,500 ರೂ.ವಿನ ದಂಡವನ್ನು ವಿಧಿಸಿದ್ದಾರೆ.