ಹಲ್ದ್ವಾನಿ: ಗಂಡಿನ ಕಡೆಯವರು ಕಳುಹಿಸಿಕೊಟ್ಟ ಲೆಹೆಂಗಾ ಚೆನ್ನಾಗಿಲ್ಲವೆಂಬ ಕಾರಣಕ್ಕೆ ವಧುವು ಮದುವೆಯನ್ನೇ ರದ್ದು ಮಾಡಿದ ಘಟನೆ ಉತ್ತರಾಖಂಡ ರಾಜ್ಯದ ಹಲ್ದ್ವಾನಿಯಲ್ಲಿ ನಡೆದಿದೆ.
ಹಲ್ದ್ವಾನಿಯ ಹುಡುಗಿ ಮತ್ತು ಅಲ್ಮೋರಾದ ಯುವಕನ ಮದುವೆ ನಿಶ್ಚಿತಾರ್ಥವು ಇದೇ ವರ್ಷದ ಜೂನ್ ನಲ್ಲಿ ನಡೆದಿತ್ತು. ಮದುವೆ ಕಾರ್ಯಕ್ರಮವು ನವೆಂಬರ್ 5ರಂದು ನಡೆಯುವುದರಲ್ಲಿತ್ತು. ಅದಕ್ಕೂ ಮೊದಲು ಈ ಘಟನೆ ನಡೆದಿದೆ.
ಆದರೆ ಅಕ್ಟೋಬರ್ 30ರಿಂದ ಎರಡೂ ಕುಟುಂಬಗಳು ಮದುವೆಯನ್ನು ನಿಲ್ಲಿಸಲು ನಿರ್ಧರಿಸಿದೆ.
ವರನ ತಂದೆ ಲಕ್ನೋದಿಂದ 10,000 ರೂ ಮೌಲ್ಯದ ಲೆಹೆಂಗಾವನ್ನು ಆರ್ಡರ್ ಮಾಡಿದ್ದರು. ಅದನ್ನು ಸೊಸೆಯಾಗುವ ಯುವತಿಗೆ ಕಳುಹಿಸಿದ್ದರು. ಆದರೆ ಯುವತಿಗೆ ಆ ಲೆಹೆಂಗಾ ಇಷ್ಟವಾಗಲಿಲ್ಲ. ಈ ವಿಚಾರ ಹುಡುಗನ ಮನೆಯವರಿಗೆ ತಿಳಿದು ವಿಷಯ ಉಲ್ಬಣಗೊಂಡಿತು. ಹುಡುಗಿ ಅಂತಿಮವಾಗಿ ತನ್ನ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.
Related Articles
ಇದನ್ನೂ ಓದಿ:ಹೊಸಪೇಟೆ: ಶೀಘ್ರದಲ್ಲೇ 2ಎ ಮೀಸಲಾತಿ ದೊರೆಯಲಿದೆ ಎಂಬ ವಿಶ್ವಾಸವಿದೆ: ವಚನಾನಂದ ಶ್ರೀ
ಈ ವೇಳೆ ವರನ ತಂದೆ ಹುಡುಗಿಗೆ ತನ್ನ ಎಟಿಎಂ ಕಾರ್ಡ್ ನೀಡಿ ಆಕೆಯ ಇಷ್ಟದ ಲೆಹೆಂಗಾ ಖರೀದಿಸುವಂತೆ ಹೇಳಿದ್ದಾಗಿ ವರದಿಯಾಗಿದೆ. ಆದರೆ, ಅದೂ ವ್ಯರ್ಥವಾಗಿತು. ಕೊನೆಗೆ ಈ ವಿಚಾರ ಪೊಲೀಸರಿಗೆ ತಿಳಿದು ಸಂಧಾನ ಮಾಡಲು ಮುಂದಾದರೂ ಪ್ರಯೋಜನವಾಗಲಿಲ್ಲ.