ಪಾಟ್ನಾ: ಮದುವೆ ವೇದಿಕೆಯಲ್ಲಿ ಯುವತಿಯೊಬ್ಬಳು ವರನನ್ನು ನಿರಾಕರಿಸಿದ ಘಟನೆ ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ರಸಲ್ಪುರ ಪೊಲೀಸ್ ವ್ಯಾಪ್ತಿಯ ಕಹಲ್ಗಾಂವ್ ಮೂಲದ ವಧುವಿನ ವಿವಾಹವು ಮೇ 15 ರಂದು (ಸೋಮವಾರ) ಧನೌರಾ ಮೂಲದ ವರನೊಂದಿಗೆ ನಿಶ್ಚಯವಾಗಿತ್ತು. ಇನ್ನೇನು ಹಾರ ಬದಲಾಯಿಸಿಕೊಂಡು ಮದುವೆ ಕಾರ್ಯಕ್ರಮ ಸಮಾಪ್ತಿ ಆಗಬೇಕು ಅಷ್ಟೋತ್ತಿಗೆ ವಧು ತನಗೆ ಈ ಮದುವೆ ಬೇಡವೆಂದು ನಿಶ್ಚಯಿಸಿದ್ದಾಳೆ.
ಮದುವೆ ದಿಬ್ಬಣದೊಂದಿಗೆ ನೃತ್ಯ ಮಾಡಿಕೊಂಡು ಬಂದ ವರ, ಮದುವೆ ಮಂಟಪಕ್ಕೆ ತಲುಪಿದ್ದಾನೆ. ವೇದಿಕೆಗೆ ಬಂದು ಹಾರ ಬದಲಾಯಿಸುವಾಗ ಯುವತಿ ವಧುವನ್ನು ನಿರಾಕರಿಸಿ ಮದುವೆ ಮಂಟಪದಿಂದ ಕೆಳಗೆ ಇಳಿದಿದ್ದಾರೆ. ಇದರಿಂದ ಕೆಲ ಸ್ಥಳದಲ್ಲಿ ಗದ್ದಲ ಉಂಟಾಯಿತು. ಆದರೆ ಆ ಬಳಿಕ ಯುವತಿಯ ಬಳಿ ಮದುವೆಯನ್ನು ಯಾಕೆ ನಿರಾಕರಿಸಿದ ಎಂದ ಮನೆಯವರು ಕೇಳಿದ್ದಾರೆ.
ಇದನ್ನೂ ಓದಿ: Indore: ಮದುವೆಗೆ ಕೆಲ ನಿಮಿಷ ಇರುವಾಗಲೇ ವಿಷ ಸೇವಿಸಿದ ವಧು – ವರ
Related Articles
ವರ ಕುಡಿದು ಬಂದಿದ್ದಾನೆ ಮತ್ತು ಆತ ತನಗಿಂತ ಹಿರಿಯನಾಗಿದ್ದೇನೆ. ನಾನು ಈ ಮದುವೆಯನ್ನು ಆಗಲಾರೆ ಎಂದಿದ್ದಾಳೆ. ಎರಡೂ ಕುಟುಂಬದವರು ಯುವತಿಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯುವತಿ ತನ್ನ ನಿರ್ಧಾರಕ್ಕೆ ಬದ್ದಳಾಗಿದ್ದಾಳೆ.
ಕೆಲಕಾಲ ಗೊಂದಲದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ವರನ ಮನೆಯವರಿಗೆ ಬುದ್ದಿಮಾತನ್ನು ಹೇಳಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಎಂದು ʼಆಜ್ ತಕ್ʼ ವರದಿ ತಿಳಿಸಿದೆ.