Advertisement

ವೈರಲ್ ವಿಡಿಯೋ : ಬಿದ್ದು-ಎದ್ದು ಕುಣಿದ ವಧು-ವರರು

08:24 AM Sep 28, 2021 | Team Udayavani |

ಮದುವೆಯಲ್ಲಿ ಮದು ಮಕ್ಕಳು ಚಂದವಾಗಿ ಸಿಂಗರಿಸಿಕೊಂಡು ನೆರದಿದ್ದ ಜನರ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಡೋದು ಸಹಜ. ಆದ್ರೆ ಕೆಲವುಬಾರಿ ನಾವು ಅಂದುಕೊಂಡಂತೆ ಆಗದೆ ಬೇರೆ ಏನೋ ನಡೆದು ನೋಡುಗರಿಗೆ ಹಾಸ್ಯಮಯವಾಗಿ ಕಾಣಿಸುತ್ತದೆ. ಇದಕ್ಕೆ ಉದಾಹರಣೆಯೆಂಬಂತೆ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

Advertisement

ಮದುವೆ ಎಲ್ಲರ ಕನಸು. ಆ ಕನಸಿನ ದಿನದಂದು ಹೀಗೇ ಕುಣಿದಾಡಬೇಕೆಂದು ಯೋಜನೆಯನ್ನೂ ಹಾಕಿ ಕೊಂಡಿರುತ್ತಾರೆ. ಅದೇ ರೀತಿ ಮದುವೆಯ ದಿನದಂದು ವೇದಿಕೆ ಮೇಲೆ ಬಂದು ಕುಣಿದಾಡಲುತಯಾರಿ ನಡೆ ಸಿಕೊಂಡಿದ್ದ ಜೋಡಿಯೊಂದರ ಪ್ಲ್ರಾನ್‌ ಉಲ್ಟಾ ಆಗಿರುವ ಘಟನೆ ನಡೆದಿದೆ.

ವೇದಿಕೆಗೆ ಬರುವಾಗ ಕೈ ಹಿಡಿದು ಕುಣಿದಾಡುತ್ತಾ ಬರುತ್ತಾರೆ. ವೇದಿಕೆಗೆ ಬಂದೊಡನೆ ವರ, ವಧುವನ್ನು ಬೆನ್ನ ಮೇಲೆ ಹೊತ್ತು ಕುಣಿದಾಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಕಾಲು ಜಾರಿ ವೇದಿಕೆಯಿಂದ ಕೆಳಗೆ ಬೀಳುತ್ತಾನೆ. ಬಿದ್ದರೂ ಮತ್ತೆ ಮೇಲೇಳುವ ಜೋಡಿ ಅದೇ ಖುಷಿಯಲ್ಲಿ ನೃತ್ಯ ಮುಂದುವರಿಸುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲಕ್ಷಾಂತರ ಜನರು ವಿಡಿಯೋವನ್ನು ಮೆಚ್ಚಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next