Advertisement

ಇತರೆ ಡೀಲ್‌ಗ‌ಳಲ್ಲೂ ಮೈಕೆಲ್‌ಗೆ ಲಂಚ!

12:30 AM Jan 06, 2019 | Team Udayavani |

ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಹಗರಣದಲ್ಲಿ ಬಂಧಿತ ದಲ್ಲಾಳಿ ಕ್ರಿಶ್ಚಿಯನ್‌ ಮೈಕೆಲ್‌ ವಿಚಾರಣೆಯ ವೇಳೆ ಜಾರಿ ನಿರ್ದೇಶನಾಲಯಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಕೇವಲ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಒಪ್ಪಂದವಲ್ಲ, ಇತರ ಒಪ್ಪಂದಗಳಲ್ಲೂ ಮೈಕೆಲ್‌ ಲಂಚ ಸ್ವೀಕರಿಸಿದ್ದಾನೆ. ಇದರ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ದೆಹಲಿ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ತಿಳಿಸಿದೆ.

Advertisement

300 ಕೋಟಿ ರೂ. ಅನ್ನು ಅಗಸ್ಟಾ ಪ್ರಕರಣದಲ್ಲಿ ಮೈಕೆಲ್‌ ಲಂಚದ ರೂಪದಲ್ಲಿ ಸ್ವೀಕರಿಸಿದ್ದಾನೆ. ಈ ಹಣವನ್ನು ಸ್ವೀಕರಿಸಲು ಆತ ಹವಾಲಾ ಆಪರೇಟರುಗಳನ್ನು ಬಳಸಿಕೊಂಡಿದ್ದಾನೆ ಮತ್ತು ಸ್ವತ್ತುಗಳನ್ನು ಖರೀದಿ ಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ ವಿವರಿಸಿದೆ.

ನ್ಯಾಯಾಂಗ ವಶಕ್ಕೆ: ಮೈಕೆಲ್‌ಗೆ ಕೋರ್ಟ್‌ ನೀಡಿದ್ದ 14 ದಿನಗಳ ವರೆಗೆ ಜಾರಿ ನಿರ್ದೇಶನಾಲಯ ಕಸ್ಟಡಿ ಅವಧಿ ಪೂರ್ಣಗೊಂಡಿದ್ದ ರಿಂದ ಕೋರ್ಟ್‌ಗೆ ಮಾಹಿತಿ ನೀಡಿದ ಇ.ಡಿ, ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸುವಂತೆ ಆಗ್ರಹಿಸಿತು. ಈತ ವಿದೇಶಿ ಪ್ರಜೆ ಯಾಗಿದ್ದು, ಬಿಡುಗಡೆಗೊಳಿಸಿದರೆ ದೇಶ ಬಿಟ್ಟು ತೊರೆಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 26 ವರೆಗೆ ಈತನನ್ನು ನ್ಯಾಯಾಂಗ ವಶಕ್ಕೆ ಕೋರ್ಟ್‌ ವಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next