Advertisement

Bribe: ಬಾಂಡ್ ನೀಡಲು ಫಲಾನುಭವಿಗಳಿಂದ ಲಂಚ… ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ

09:12 PM Jun 05, 2024 | Team Udayavani |

ಹಾವೇರಿ: ಅಂತರ್ಜಾತಿ ವಿವಾಹದ ಪ್ರೋತ್ಸಾಹಧನದ ಎಫ್‌.ಡಿ. ಬಾಂಡ್‌ ನೀಡಲು, ಫಲಾನುಭವಿಯಿಂದ ₹10 ಸಾವಿರ ಲಂಚ ಪಡೆಯುತ್ತಿದ್ದ ಹಾವೇರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕೇಸ್ ವರ್ಕರ್‌ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಆರೋಪಿ ಪೀರ್‌ಸಾಬ್‌ ದೇವಿಹೊಸೂರು ಎಂಬ ಸರ್ಕಾರಿ ನೌಕರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿಯ ಮಂಜಪ್ಪ ಬಂಕಾಪುರ ಮತ್ತು ರುದ್ರಪ್ಪ ಶಿರಸಂಗಿ ಅವರು ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ನೀಡುವ ಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು.

ಇವರ ಬ್ಯಾಂಕ್‌ ಖಾತೆಗೆ ₹1.50 ಲಕ್ಷ ಜಮಾ ಆಗಿತ್ತು. ಬಾಕಿ ₹1.50 ಲಕ್ಷದ ಎಫ್‌.ಡಿ. ಬಾಂಡ್‌ ನೀಡಲು ₹15 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಹಾವೇರಿಯ ಪ್ರವಾಸಿ ಮಂದಿರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು.

ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆಯಿತು.

Advertisement

ಇದನ್ನೂ ಓದಿ: ಗುಂಡ್ಲುಪೇಟೆ: ಕಾಡಿನಿಂದ ನಾಡಿಗೆ ಬಂದ ಕರಡಿಯನ್ನು ಸೆರೆ ಹಿಡಿದ ಅರಣ್ಯ ಅಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next