Advertisement
ಹೊಸ ಲುಕ್‌ನಿಂದ ದೇಶಾದ್ಯಂತ ಮಿಂಚಿನ ಸಂಚಾರ ನಡೆಸಿದ್ದ ಮಾರುತಿ ವಿಟಾರಾ ಬ್ರೆಝಾ ಈಗ ಹೊಸ ಅವತಾರದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇತ್ತೀಚೆಗಷ್ಟೇ ಮುಗಿದ ದೆಹಲಿ ಆಟೋ ಶೋನಲ್ಲಿ ಅನಾವರಣಗೊಂಡಿರುವ ಈ ಕಾರು, ಮೊದಲ ಮಾದರಿಗಿಂತಲೂ ಹಲವು ಬದಲಾವಣೆಗಳೊಂದಿಗೆ ಬಂದಿದೆ.
ಈ ಎಸ್‌ಯುವಿಯ ಇನ್ನೊಂದು ವಿಶೇಷವೆಂದರೆ, ಮೊದಲು ಬಂದಿದ್ದು ಕೇವಲ ಡೀಸೆಲ್ ವರ್ಷನ್. ಆಗ ಪೆಟ್ರೋಲ್ ಇರಲೇ ಇಲ್ಲ. ಆದರೂ, ಇದು ಮಾರುಕಟ್ಟೆಗೆ ಪ್ರವೇಶಿಸಿದ ಅತಿ ಕಡಿಮೆ ಅವಧಿಯಲ್ಲಿ ತನ್ನದೇ ಛಾಪು ಮೂಡಿಸಿತ್ತು. ಆದರೆ, ಈಗ ಡೀಸೆಲ್ ಗಾಡಿಯನ್ನು ಸಂಪೂರ್ಣವಾಗಿ ಬಿಟ್ಟು, ಕೇವಲ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ. ಹಳೆಯ ವಿಟಾರಾಗೆ ಹೋಲಿಸಿದರೆ ಒಳಾಂಗಣ ಮತ್ತು ಹೊರಾಂಗಣ ಎರಡರಲ್ಲೂ ಬದಲಾವಣೆ ಮಾಡಿಕೊಂಡಿದೆ. ಹೊಸ ಹೆಡ್‌ಲ್ಯಾಂಪ್‌ಗ್ಳು, ಜತೆಗೆ ಎಲ…ಇಡಿ ಪೊ›ಜೆಕ್ಟರ್ ಯುನಿಟ್‌ಗಳು, ಅಷ್ಟೇ ಅಲ್ಲ, ಎಲ್‌ಇಡಿ ಡಿಆರ್‌ಎಲ್‌ಗಳು ಗಮನ ಸೆಳೆಯುತ್ತಿವೆ. ಹಾಗೆಯೇ, 16 ಇಂಚಿನ ಅಲಾಯ್ ವೀಲ್‌ಗಳೂ ಕಾರಿಗೆ ಬೇರೆಯದ್ದೇ ರೀತಿಯ ಲುಕ್ ನೀಡಿವೆ. ಮೈಲೇಜ್ ಎಷ್ಟು?
ಇದು 1.5 ಲೀ. ಕೆ ಸರಣಿಯ ಪೆಟ್ರೋಲ್ ಎಂಜಿನ್ ಕಾರು. ಮೊದಲಿನ ವರ್ಷನ್‌ನಲ್ಲಿ 1.3 ಲೀ. ಫಿಯೆಟ್ ಡೀಸೆಲ್ ಎಂಜಿನ್ ನೀಡಲಾಗಿತ್ತು. ಇದು 5 ಗೇರ್‌ಗಳನ್ನು ಒಳಗೊಂಡಿದೆ. ಇದು ಮ್ಯಾನುವಲ್ ಆಗಿದ್ದರೆ, ಆಟೋಮ್ಯಾಟಿಕ್‌ನಲ್ಲಿ 4 ಸ್ಪೀಡ್ ಟಾರ್ಕ್ ಕನ್ವರ್ಟರ್‌ಅನ್ನು ನೀಡಲಾಗಿದೆ. ಇದು ಪ್ರತಿ ಲೀ. ಪೆಟ್ರೋಲ್‌ಗೆ 17.3 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿಯೇ ಹೇಳಿದೆ. ಇನ್ನು ಆಟೋಮ್ಯಾಟಿಕ್‌ನಲ್ಲಿ 18 ಕಿ.ಮೀ. ನಿರೀಕ್ಷಿಸಬಹುದಾಗಿದೆ. ಹಾಗೆಯೇ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಮಾರ್ಟ್ ಪ್ಲೇ ಸ್ಟುಡಿಯೋ ಸಿಸ್ಟಮ್ ಇದೆ.
Related Articles
ಎಂಜಿನ್ – 1.5 ಲೀ. ಪೆಟ್ರೋಲ್
ಪವರ್ – 103 ಬಿಎಚ್‌ಪಿ
ಟಾರ್ಕ್ – 138ಎನ್.ಎಂ
ಟ್ರಾನ್ಸ್ ಮಿಷನ್ – 5 ಸ್ಪೀಡ್(ಎಂ.ಟಿ), 4 ಸ್ಪೀಡ್(ಆಟೋಮ್ಯಾಟಿಕ್)
ವೀಲ್ ಬೇಸ್ – 2,500 ಎಂ.ಎಂ
Advertisement
ಹೋಂಡಾ ಆಕ್ಟಿವಾ 6ಜಿ
ಎಂಜಿನ್ – 109.5 ಸಿಸಿಸಿಲಿಂಡರ್ – 1
ಎಮಿಷನ್ – ಬಿಎಸ್ 6
ಟ್ಯಾಂಕ್ ಸಾಮರ್ಥ್ಯ – 5.3 ಲೀ.
ಮೈಲೇಜ್ – 45 ಕಿ.ಮೀ. ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಹೋಂಡಾ ಆಕ್ಟಿವಾ ಸ್ಕೂಟರ್, ಇನ್ನಷ್ಟು ಸುಧಾರಿತ ರೂಪದಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ. ಸದ್ಯ ಹೋಂಡಾ ಆಕ್ಟಿವಾ 5ಜಿ ಸದ್ದು ಮಾಡುತ್ತಿದ್ದು ಇದರ ನಂತರದಲ್ಲಿ 6ಜಿ ಬಂದಿದೆ. ಇದು ಬಿಎಸ್6 ಮಾದರಿಯಲ್ಲಿ ಬಂದಿದ್ದು, ವಿನ್ಯಾಸದಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ. ಇದು ಸಂಪೂರ್ಣವಾಗಿ ಮೆಟಾಲಿಕ್ ಬಾಡಿಯಾಗಿದ್ದು, ಮುಂಭಾಗದಲ್ಲಿ ಹೊಸ ವಿನ್ಯಾಸವನ್ನು ಗುರುತಿಸಬಹುದಾಗಿದೆ. ಹೆಡ್‌ಲ್ಯಾಂಪ್ ಹಿಂದಿನ ಮಾದರಿಯಲ್ಲಿನದ್ದೇ ಉಳಿಸಿಕೊಂಡಿದ್ದರೂ, ಎಲ್‌ಇಡಿ ಘಟಕವನ್ನು ಡಿಲಕ್ಸ್ ವೇರಿಯಂಟ್ ಮಾತ್ರ ಉಳಿಸಿಕೊಳ್ಳಲಾಗಿದೆ. ಆದರೆ, ಇದು ಹೋಂಡಾ ಆಕ್ಟೀವಾ 5ಜಿಯಲ್ಲಿ ಎಲ್ಲಾ ವೇರಿಯಂಟ್‌ಗಳಲ್ಲೂ ಇತ್ತು.
ಹಿಂದಿನ ವರ್ಷನ್‌ಗಿಂತ 72ಎಂ.ಎಂ ಉದ್ದವಿದ್ದು, ವೀಲ್ ಬೇಸ್ ಕೂಡ 22ಎಂಎಂ ನಷ್ಟು ದೊಡ್ಡದಾಗಿದೆ. ಜತೆಗೆ ಗ್ರೌಂಡ್ ಕ್ಲಿಯರೆನ್ಸ್ ನಲ್ಲಿ 18ಎಂ.ಎಂ.ನಷ್ಟು ಹೆಚ್ಚಳವಾಗಿದೆ. ಪವರ್ ವಿಚಾರಕ್ಕೆ ಬಂದರೆ, 109 ಸಿಸಿ ಸಾಮರ್ಥ್ಯದ ಸ್ಕೂಟರ್ ಆಗಿದ್ದು, ಬಿಎಸ್6 ಎಮಿಷನ್‌ಗೆ ಒಳಪಟ್ಟಿದೆ. ಅಲ್ಲದೆ, ಮೈಲೇಜ್ ಸಾಮರ್ಥ್ಯವೂ ಶೇ.10ರಷ್ಟು ಹೆಚ್ಚಾಗಿದೆ. ಆದರೂ, ಇದರ ಪವರ್, ಹೋಂಡಾ ಆಕ್ಟಿವಾ 5ಜಿಗಿಂತ ಕೊಂಚ ಕಡಿಮೆ ಇದೆ. ಬ್ರೇಕ್ ಚುರುಕಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುವ ಸಾಮರ್ಥ್ಯವನ್ನು ಪಡೆದಿದೆ. ಬೆಂಗಳೂರಿನಲ್ಲಿ ಈ ಸ್ಕೂಟರ್‌ನ ಆನ್ ರೋಡ್ ದರ ಅಂದಾಜು 80,000 ರೂ.(ಡಿಲಕ್ಸ್ ಮಾದರಿ)ನಷ್ಟಿದೆ. ಹಾಗೆಯೇ ಸ್ಟಾಂಡರ್ಡ್ ವೇರಿಯಂಟ್ ಅಂದಾಜು 78,000 ರೂ. ಗಳಿಗೆ ಸಿಗಲಿದೆ.