Advertisement
ಮೃತರ ಜತೆ ಒಂದೇ ತಾಸುಯಾರೇ ಕೋವಿಡ್‌ಗೆ ಬಲಿಯಾದರೂ ಮೃತದೇಹದ ಜತೆಗೆ ಇರಲು ಮನೆಯವರಿಗೆ ಸಿಗುವುದು ಒಂದೇ ತಾಸಿನ ಸಮಯ. ಹೆಚ್ಚೆಂದರೆ 10 ಮಂದಿ ಮಾತ್ರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬಹುದು.
ಬ್ರೆಜಿಲ್‌ನ ಅತಿ ದೊಡ್ಡ ನಗರ ಸಾವೊ ಪೌಲೊ ಒಂದರಲ್ಲೇ ನಿತ್ಯ ಸರಾಸರಿಯಾಗಿ 40 ಶವ ಸಂಸ್ಕಾರಗಳು ನೆರವೇರುತ್ತಿವೆ. ಕೆಲವೊಮ್ಮೆ ಒಂದೇ ದಿನದಲ್ಲಿ 60 ಶವಗಳನ್ನು ದಫನ ಮಾಡಿದ್ದೂ ಇದೆ. ಇತ್ತೀಚೆಗಷ್ಟೇ ನಗರಪಾಲಿಕೆ ಹೆಚ್ಚುವರಿಯಾಗಿ 5,000 ಶವಚೀಲಗನ್ನು ಖರೀದಿಸಿದೆ ಹಾಗೂ ಶವ ಸಂಸ್ಕಾರಕ್ಕಾಗಿ ಹೆಚ್ಚುವರಿ ಜನರನ್ನು ನೇಮಿಸಿಕೊಂಡಿದೆ. ಇಷ್ಟಾಗಿಯೂ ಬ್ರೆಜಿಲ್‌ನಲ್ಲಿ ಕೋವಿಡ್ ಪರಾಕಾಷ್ಠೆಗೆ ತಲುಪಿಲ್ಲ. ಜೂನ್ ಅಥವಾ ಜುಲೈಯಲ್ಲಿ ಪರಾಕಾಷ್ಠೆಗೆ ತಲುಪುವ ನಿರೀಕ್ಷೆಯಿದೆ ಎನ್ನುತ್ತಿದ್ದಾರೆ ತಜ್ಞರು.
Related Articles
Advertisement
300 ಪರೀಕ್ಷೆ ಬ್ರೆಜಿಲ್‌ನಲ್ಲಿ ಈಗಲೂ ದಿನಕ್ಕೆ ಪ್ರತಿ 10 ಲಕ್ಷದಲ್ಲಿ ಹೆಚ್ಚೆಂದರೆ 300 ಮಂದಿಯ ಪರೀಕ್ಷೆ ಮಾಡಲಾಗುತ್ತಿದೆ. ಅದೇ ಅಮೆರಿಕದಲ್ಲಿ ಪ್ರತಿ 10 ಲಕ್ಷಕ್ಕೆ 9,500 ಮಂದಿಯನ್ನು ಪರೀಕ್ಷಿಸಲಾಗುತ್ತಿದೆ. ಪರೀಕ್ಷೆಗೆ ಅಗತ್ಯವಿರುವ ಸಾಧನಗಳ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ. ಇಡೀ ಜಗತ್ತು ಈ ಸಾಧನಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಪೂರೈಕೆ ಕಡಿಮೆಯಾಗಿದೆ. ಬ್ರೆಜಿಲ್‌ನಲ್ಲಿ ಈಗ ಆಸ್ಪತ್ರೆಗೆ ದಾಖಲಾಗಿರುವ ಚಿಂತಾಜನ ಸ್ಥಿತಿಯಲ್ಲಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಲೆಕ್ಕ ಪಕ್ಕಾ ಅಲ್ಲ
ಬ್ರೆಜಿಲ್‌ನ ಸರಕಾರಿ ಅಂಕಿಅಂಶಗಳು “ಉಸಿರಾಟದ ಸಮಸ್ಯೆ’ಯಿಂದ ಸಾಯುತ್ತಿರುವವರ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10ರಷ್ಟು ಹೆಚ್ಚಾಗಿದೆ ಎಂದು ಹೇಳುತ್ತಿವೆ. ಆದರೆ ಬರೀ ಸರಕಾರಿ ಲೆಕ್ಕ ಮಾತ್ರ. ವಾಸ್ತವದಲ್ಲಿ ಸೋಂಕಿನ ಮತ್ತು ಸಾವಿನ ಪ್ರಮಾಣ ಬಹಳ ಹೆಚ್ಚು ಇದೆ. ನಿಧಾನ ಗತಿ
ಬ್ರೆಜಿಲ್‌ನಲ್ಲಿ ಎಲ್ಲವೂ ನಿಧಾನ ಗತಿಯಲ್ಲಿ ಸಾಗುತ್ತಿದೆ ಎನ್ನುವುದು ಜನರ ಮಾತ್ರವಲ್ಲ ತಜ್ಞರ ಆಕ್ರೋಶವೂ ಹೌದು. ವೈರಾಣು ತಜ್ಞ ಡಾ| ಡೇನಿಯಲ್ ತಬಕ್ ಹೇಳುವಂತೆ ದೇಶ ವೈರಸ್ ಎದುರಿಸುವ ತಯಾರಿ ಮಾಡುವಲ್ಲಿಯೇ ನಿಧಾನ ಗತಿ ಅನುಸರಿಸಿತ್ತು. ವೈರಸ್ ಬದಲಾಗಿ ದೇಶದಲ್ಲಿ ಕಾರ್ನಿವಲ್‌ನ ತಯಾರಿ ನಡೆಯುತ್ತಿತ್ತು. ಫೆ.26ರಂದು ಮೊದಲ ಸೋಂಕು ಪತ್ತೆಯಾಯಿತು. ಅನಂತರ ನಿರಂತರ ವಾಗಿ ಏರುಗತಿಯಲ್ಲಿದೆ ಎನ್ನುತ್ತಾರೆ ಡಾ| ಡೇನಿಯಲ್. ಸಾಮಾಜಿಕ ಅಂತರ ಪಾಲನೆ ಹಾಗೂ ಇತರ ನಿರ್ಬಂಧಗಳಿಂದ ವೈರಸ್ ಹರಡುವುದನ್ನು ತಡೆಯಬಹುದಾದರೂ ಇದನ್ನು ದೇಶದ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರೇ ವಿರೋಧಿಸುತ್ತಿದ್ದಾರೆ. ಬ್ರೆಜಿಲ್‌ನಲ್ಲಿ ಕಡಿಮೆಯೆಂದರೂ 15 ಲಕ್ಷ ಕೋವಿಡ್ ಸೋಂಕಿತರು ಇರುವ ಸಾಧ್ಯತೆಯಿದೆ.ಇದು ಸರಕಾರಿ ಲೆಕ್ಕಕ್ಕಿಂತ 15 ಪಟ್ಟು ಹೆಚ್ಚು. ನಗರಳಲ್ಲಿರುವ ಸ್ಲಮ್‌ಗಳೇ ಕೋವಿಡ್‌ನ ಕೇಂದ್ರ ಬಿಂದುಗಳಾಗಿವೆ.