Advertisement
ಬ್ರಸೆಲ್ಸ್‌ನಲ್ಲಿ ಐರೋಪ್ಯ ಒಕ್ಕೂಟದ ಸದಸ್ಯರು ಹಾಗೂ ಬ್ರಿಟನ್ ಸಭೆ ನಡೆಸುತ್ತಿದ್ದು, ಶನಿವಾರ ಅಂತಿಮ ರೂಪ ದೊರೆಯಲಿದೆ. ಎಲ್ಲ 27 ಸದಸ್ಯರೂ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದೇ ವೇಳೆ, ಶನಿ ವಾರ ಬ್ರಿಟನ್‌ನ ಸಂಸತ್ತಿನಲ್ಲೂ ಈ ಮಸೂದೆಗೆ ಅಂಗೀಕಾರ ಲಭ್ಯವಾಗುವ ನಿರೀಕ್ಷೆ ವ್ಯಕ್ತವಾ ಗಿದೆ. ಈ ಎರಡೂ ಪ್ರಕ್ರಿಯೆ ಪೂರ್ಣಗೊಂಡರೆ ಅಕ್ಟೋಬರ್ 31ರಂದು ಐರೋಪ್ಯ ಒಕ್ಕೂಟ ದಿಂದ ಬ್ರಿಟನ್ ಅಧಿಕೃತವಾಗಿ ಬೇರ್ಪಡಲಿದೆ.
ಬ್ರೆಕ್ಸಿಟ್ ಒಪ್ಪಂದ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆಯೇ ಮುಂಬಯಿ ಷೇರುಪೇಟೆಯಲ್ಲಿ ಟಾಟಾ ಮೋಟಾರ್ಸ್ ಷೇರು ಏರುಗತಿ ಕಂಡಿದೆ. ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ ವಹಿವಾಟಿಗೆ ಬ್ರೆಕ್ಸಿಟ್ ಅತಂತ್ರದಿಂದ ಭಾರಿ ಹೊಡೆತ ಉಂಟಾಗಿತ್ತು. ಈಗ ಒಪ್ಪಂದ ಅಂತಿಮ ಹಂತಕ್ಕೆ ಬರುತ್ತಿದ್ದಂತೆಯೇ ಶೇ. 10 ರಷ್ಟು ಏರಿಕೆ ಕಂಡಿದೆ.