Advertisement
ಈ ಸಂದರ್ಭ ಆರ್‌ಜೆ ರಶ್ಮಿ ಮಾತನಾಡಿ, ಬಿರುವೆರ್ ಕುಡ್ಲ ಕಳೆದ ಮೂರು ವರ್ಷ ದಿಂದ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಹಾರೈಸಿದರು.
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಲ್ಲಾಳ್‌ಬಾಗ್ ಮಾತನಾಡಿ, ಹಲವು ಕುಟುಂಬಗಳು ಸಹಾಯ ಹಸ್ತ ಕೋರಿ ನಿತ್ಯ ಬರುತ್ತಿದ್ದಾರೆ. ಸಂಘದ ಸದಸ್ಯರು, ದಾನಿಗಳಿಂದ ಸಂಗ್ರಹಿಸಿದ ನಿಧಿಯಿಂದ ಪ್ರತೀ ತಿಂಗಳು ಬಡವರಿಗೆ ನೆರವಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸುಮಾರು 70 ಲಕ್ಷ ರೂ. ಮಿಕ್ಕಿ ಧನ ಸಹಾಯ ಮಾಡಲಾಗಿದೆ ಎಂದರು. ಧನ ಸಹಾಯ ಪಡೆದ ಸದಾಶಿವ ಪೂಜಾರಿ ಅವರು ಬಿರುವೆರ್ ಕುಡ್ಲ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.ಉದ್ಯಮಿ ರವೀಂದ್ರ ನಿಕ್ಕಮ್, ಉದಯ ಪೂಜಾರಿ ಬಲ್ಲಾಳ್‌ಬಾಗ್, ಪ್ರಮೋದ್ ಬಲ್ಲಾಳ್‌ಬಾಗ್, ಲತೇಶ್ ಬಲ್ಲಾಳ್ ಬಾಗ್, ಮನೀಶ್ ಚಿಲಿಂಬಿ, ಕೀರ್ತನ್ ಯೆಯ್ನಾಡಿ, ವಿನೀತ್ ಜಿ. ಬಂಗೇರ, ಲಿಖಿತ್ ಆರ್. ಕೋಟ್ಯಾನ್, ದೀಕ್ಷಿತ್ ಕೋಟ್ಯಾನ್, ಸೂರಜ್ ಕದ್ರಿ, ಚೇತನ್ ರಾಜ್ ಗೌಡ, ಲೋಕೇಶ್ ಶೆಟ್ಟಿ, ರಘುರಾಂ ಶೆಟ್ಟಿ, ತುಕಾರಾಂ ಶೆಟ್ಟಿ, ಸುಧಾಕರ ಶೆಟ್ಟಿ, ಶೇಷ ಪ್ರಸಾದ್, ನಿತೀಶ್ ಶೆಟ್ಟಿ, ರೋಹಿದಾಸ್, ರೋಶನ್ ಮಿನೇಜಸ್, ಮಹೇಶ್ ಅಮೀನ್, ಸುನೀಲ್ ಶೆಟ್ಟಿ ವೇರ್ ಹೌಸ್, ಉದ್ಯಮಿ ಸದಾನಂದ ಪೂಜಾರಿ, ಮಹೇಶ್ ಶೆಟ್ಟಿ ಚಾರ್ವಾಕ ಮುಂಬಯಿ, ವೆಂಕಟೇಶ್ ಭಂಡಾರಿ ಮುಂಬಯಿ, ರಿನೀತ್ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು.