ಲಂಡನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಇಂಗ್ಲೆಂಡ್ ನ ಸೌಥಂಪ್ಟನ್ ನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಬಗ್ಗೆ ಚರ್ಚೆಗಳು ಈಗಾಗಲೇ ಆರಂಭವಾಗಿದೆ.
ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೆಲ್ಲಲು ಭಾರತಕ್ಕಿಂತ ಕಿವೀಸ್ ತಂಡಕ್ಕೆ ಅನುಕೂಲಗಳು ಜಾಸ್ತಿ ಎಂದಿದ್ದಾರೆ.
ಇದನ್ನೂ ಓದಿ:ನಾನೊಬ್ಬಳು ಕಲಾವಿದೆ…ನನಗೆ ಕಿರುತೆರೆ, ಹಿರಿತೆರೆ ವ್ಯತ್ಯಾಸವಿಲ್ಲ: ವೈಷ್ಣವಿ ಗೌಡ
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನ ನ ಬೌಲಿಂಗ್ ಕಂಡೀಶನ್ ನಡುವೆ ಸಾಕಷ್ಟು ಸಾಮ್ಯತೆ ಇರುವ ಕಾರಣ ಇದು ವಿಲಿಯಮ್ಸನ್ ಪಡೆಗೆ ಸಹಾಯಕವಾಗಲಿದೆ. ಕಠಿಣ ಸ್ಪರ್ಧೆಯ ನಡುವೆಯೂ ಸ್ವಿಂಗ್ ಬೌಲಿಂಗ್ ಕಿವೀಸ್ ಗೆ ನೆರವಾಗುವ ಕಾರಣ ಅವರಿಗೆ ತುಸು ಅನುಕೂಲ ಜಾಸ್ತಿ ಎಂದಿದ್ದಾರೆ ಕಾಂಗರೂ ನಾಡಿನ ಮಾಜಿ ವೇಗಿ.
ಬ್ಯಾಟಿಂಗ್ ದೃಷ್ಟಿಕೋನದಿಂದ ನೋಡಿದರೆ, ಎರಡೂ ಕಡೆಯವರು ಸ್ವಿಂಗ್ ಬೌಲಿಂಗ್ ವಿರುದ್ಧ ಆಡಬಲ್ಲ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದಾರೆ. ಆದರೆ ಇದು ಬೌಲಿಂಗ್ ವಿಚಾರಕ್ಕೆ ಬಂದರೆ, ಯಾವ ತಂಡವು ಉತ್ತಮವಾಗಿ ಬೌಲಿಂಗ್ ಮಾಡುತ್ತದೋ, ಫೈನಲ್ ಪಂದ್ಯವನ್ನು ಆ ತಂಡ ಗೆಲ್ಲಲಿದೆ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ.