ಮುಂಬೈ: ಭಾರತೀಯ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ ಹೊಸ ನಾಯಕನ ಬಗ್ಗೆ ಚರ್ಚೆ ಆರಂಭವಾಗಿದೆ. ಹೊಸ ನಾಯಕ ಯಾರಾಗಬಹುದು ಎಂಬ ಬಗ್ಗೆ ದಿನಕ್ಕೊಂದು ರೀತಿಯ ಹೇಳಿಕೆಗಳು ಬರುತ್ತಿದೆ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಅಶ್ವಿನ್, ಪಂತ್ ಮುಂತಾದವರ ಹೆಸರುಗಳು ಟೆಸ್ಟ್ ನಾಯಕತ್ವದ ರೇಸ್ ನಲ್ಲಿ ಕೇಳಿ ಬರುತ್ತಿದೆ.
ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರೆಟ್ ಲೀ ಅವರು ಈ ಬಗ್ಗೆ ಮಾತನಾಡಿದ್ದಾರೆ. “ರಾಜೀನಾಮೆ ನೀಡಿರುವುದು ಕೊಹ್ಲಿಯ ವೈಯಕ್ತಿಕ ವಿಚಾರ. ಭಾರತ ತಂಡದಲ್ಲಿ ಟೆಸ್ಟ್ ನಾಯಕತ್ವ ವಹಿಸಬಲ್ಲಂತಹ ನಾಲ್ಕೈದು ಆಟಗಾರರಿದ್ದಾರೆ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದ” ಎಂದು ಮಾಜಿ ವೇಗಿ ಹೇಳಿದ್ದಾರೆ.
ಇದನ್ನೂ ಓದಿ:ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಕಟ್ಟಿದ ವಿಂಡೀಸ್: 3 ವರ್ಷದ ಬಳಿಕ ತಂಡ ಸೇರಿದ ರೋಚ್
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡ 4-0 ಅಂತರದಿಂದ ಆ್ಯಶಸ್ ಸರಣಿ ಗೆದ್ದುಕೊಂಡಿದೆ. ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರು ಟೆಸ್ಟ್ ನಾಯಕರಾದ ಮೊದಲ ಸರಣಿಯಲ್ಲೇ ವಿಜಯ ಸಾಧಿಸಿದರು. ಈ ಬಗ್ಗೆ ಮಾತನಾಡಿದ ಬ್ರೆಟ್ ಲೀ, ‘ ನಾಯಕನಾಗಿ ಪ್ಯಾಟ್ ಕಮಿನ್ಸ್ ಉತ್ತಮ ಕೆಲಸ ಮಾಡಿದ್ದಾರೆ. ವೇಗದ ಬೌಲರ್ ಕೂಡಾ ನಾಯಕನಾಗಬಹುದು ಎನ್ನುವುದನ್ನು ಕಮಿನ್ಸ್ ಸಾಧಿಸಿ ತೋರಿಸಿದ್ದಾರೆ. ಅವರ ಬಗ್ಗೆ ನನಗೆ ಸಂತಸವಿದೆ ಎಂದಿದ್ದಾರೆ.”
ಆಸೀಸ್ ನ ಮಾಜಿ ವೇಗಿ ಬ್ರೆಟ್ ಲೀ ಸದ್ಯ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ವರ್ಲ್ಡ್ ಜೈಂಟ್ಸ್ ಪರವಾಗಿ ಆಡುತ್ತಿದ್ದಾರೆ.