Advertisement

ಪ್ರಾಣವಾಯು ಖರೀದಿಗೆ ನೆರವು ನೀಡಿ ಮಾದರಿಯಾದ ಆಸ್ಟ್ರೇಲಿಯದ ಮಾಜಿ ವೇಗಿ ಬ್ರೆಟ್‌ಲೀ

10:58 PM Apr 27, 2021 | Team Udayavani |

ಹೊಸದಿಲ್ಲಿ : ಆಸ್ಟ್ರೇಲಿಯ ತಂಡದ ಮಾಜಿ ವೇಗಿ ಬ್ರೆಟ್‌ಲೀ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ದೊಡ್ಡ ಮೊತ್ತದ ಆರ್ಥಿಕ ಬೆಂಬಲ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅವರು “ಪಿಎಂ ಕೇರ್ ನಿಧಿ’ಗೆ 1 ಬಿಟ್‌ ಕಾಯಿನ್‌(40 ಲಕ್ಷ ಮೌಲ್ಯ) ದೇಣಿಗೆ ನೀಡಿದ್ದಾರೆ.

Advertisement

“ಪ್ರಾಣವಾಯು ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಲು ಈ ದೇಣಿಗೆಯನ್ನು ನೀಡುತ್ತಿದ್ದೇನೆ. ಭಾರತ ನನಗೆ ಎರಡನೇ ತವರು ಮನೆ ಇದ್ದಂತೆ ನನ್ನ ದೇಶವನ್ನು ಮಾತ್ರವಲ್ಲದೆ ಭಾರತ ದೇಶದ ಕ್ರಿಕೆಟ್‌ ಲೀಗ್‌ನಲ್ಲಿಯೂ ಪಾಲ್ಗೊಳ್ಳುವ ಮೂಲಕ ಭಾರತ ದೇಶವನ್ನು ಪ್ರತಿನಿಧಿಸಿದ್ದೇನೆ. ಇದೀಗ ಈ ದೇಶದ ಜನರು ಸಂಕಷ್ಟದಲ್ಲಿದ್ದು, ಇವರಿಗೆ ನೆರವಾಗುವುದು ನನ್ನ ಕರ್ತವ್ಯ. ಭಾರತ ಈ ಸಂಕಷ್ಟದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಇದಕ್ಕಾಗಿ ಜನರು ದಯವಿಟ್ಟು ಮನೆಯಲ್ಲೇ ಉಳಿಯಿರಿ, ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ , ಸಂಕಟದಲ್ಲಿದ್ದವರಿಗೆ ನೆರವಾಗಿ ಎಂದು ಬ್ರೆಟ್‌ಲೀ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಕಳವು ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳು!

Advertisement

Udayavani is now on Telegram. Click here to join our channel and stay updated with the latest news.

Next