Advertisement

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೆತ್ತವರಿಂದ ಮಂತ್ರಾಲಯ ರಾಯರ ದರ್ಶನ

11:21 AM Sep 13, 2023 | Team Udayavani |

ರಾಯಚೂರು: ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರ ಹೆತ್ತವರು ಬುಧವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.

Advertisement

ಜಿ20 ಶೃಂಗಸಭೆ ಪ್ರಯುಕ್ತ ರಿಷಿ ಸುನಕ್ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿಯವರು ರಿಷಿ ಸುನಕ್ ಅವರ ತಂದೆ ಯಶವೀರ್ ಸುನಕ್ ಹಾಗೂ ತಾಯಿ ಉಷಾ ಸುನಕ್ ಅವರನ್ನು ರಾಯರ ಮಠಕ್ಕೆ ಕರೆದುಕೊಂಡು ಬಂದರು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ದಂಪತಿಯನ್ನು ಆಶೀರ್ವದಿಸಿದರು. ಜತೆಗೆ ಶ್ರೀಗಳು ರಿಷಿ ಸುನಕ್ ಅವರಿಗೂ ರಾಯರ ಪ್ರಸಾದ, ವಸ್ತ್ರ ಹಾಗೂ ಮಂತ್ರಾಕ್ಷತೆಯನ್ನು ಕಳುಹಿಸಿದರು.

ಇದನ್ನೂ ಓದಿ: Chikkamagaluru: ಭೀಕರ ಸರಣಿ ಅಪಘಾತ… ದಂಪತಿ ಸ್ಥಳದಲ್ಲೇ ಮೃತ್ಯು, ಮಗು ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next