ಹರಾರೆ: ಜಿಂಬಾಬ್ವೆ ಕ್ರಿಕೆಟ್ ತಂಡ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸಮನ್ ಬ್ರೆಂಡನ್ ಟೇಲರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಬ್ರೆಂಡನ್ ಟೇಲರ್ ಸೋಮವಾರ ಐರ್ಲೆಂಡ್ ವಿರುದ್ಧ ಅಂತಿಮ ಪಂದ್ಯವಾಡಿದರು. 35 ವರ್ಷದ ಟೇಲರ್ ತನ್ನ ಕೊನೆಯ ಪಂದ್ಯದಲ್ಲಿ ಕೇವಲ 7 ರನ್ ಗೆ ಔಟಾಗಿ ನಿರಾಸೆ ಅನುಭವಿಸಿದರು.
2004ರಲ್ಲಿ ಶ್ರೀಲಂಕಾ ವಿರುದ್ಧದ ಬ್ರೆಂಡನ್ ತನ್ನ ಮೊದಲ ಏಕದಿನ ಪಂದ್ಯವಾಡಿದ್ದರು. ಭಾರವಾದ ಹೃದಯದಿಂದ ನಾನು ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆ. 17 ವರ್ಷಗಳ ಕ್ರಿಕೆಟ್ ಜೀವನ ನನಗೆ ವಿನಮ್ರತೆ ಕಲಿಸಿದೆ. ಈ ಸ್ಥಾನಕ್ಕೇರಲು ನಾನು ಅದೃಷ್ಟಶಾಲಿ ಎಂದು ಬ್ರೆಂಡನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಡೆಲ್ಲಿ ತಂಡಕ್ಕೆ ವೋಕ್ಸ್ ಬದಲು ಡ್ವಾರ್ಶಿಯಸ್
205 ಏಕದಿನ ಪಂದ್ಯವಾಡಿರುವ ಬ್ರೆಂಡನ್ ಟೇಲರ್ 6684 ರನ್ ಗಳಿಸಿದ್ದಾರೆ. ಜಿಂಬಾಬ್ವೆ ಪರ ಅತೀ ಹೆಚ್ಚು ರನ್ ಗಳಿಸಿದ ಆ್ಯಂಡಿ ಫ್ಲವರ್ ಅವರಿಗಿಂತ ಕೇವಲ 104 ರನ್ ಕಡಿಮೆ ಗಳಿಸಿದ್ದಾರೆ. ಫ್ಲವರ್ ಅವರು 6786 ರನ್ ಗಳಿಸಿದ್ದಾರೆ.
34 ಟೆಸ್ಟ್ ಪಂದ್ಯವಾಡಿರುವ ಬ್ರೆಂಡನ್ ಟೇಲರ್ 2320 ರನ್ ಗಳಿಸಿದ್ದಾರೆ. 45 ಟಿ20 ಪಂದ್ಯಗಳಿಂದ 934 ರನ್ ಬಾರಿಸಿದ್ದಾರೆ.