Advertisement

ಚಾಲೆಂಜ್‌ ಗೆದ್ದ “ಬ್ರೆಮರ್‌’

11:07 AM Oct 17, 2019 | Team Udayavani |

ಅಥೆನ್ಸ್‌: ವಿಶ್ವದ ಅತಿ ಇಕ್ಕಟ್ಟಿನ ಸಾಗರ ಕಾಲುವೆಗಳಲ್ಲೊಂದು ಗ್ರೀಸ್‌ನಲ್ಲಿರುವ ಕೊರಿಂತ್‌ ಕಾಲುವೆ. ಈ 6.4 ಕಿ.ಮೀ. ಉದ್ದ ಹಾಗೂ 70 ಅಡಿ ಅಗಲವಿರುವ ಕಾಲುವೆಯಲ್ಲಿ ಸಾಮಾನ್ಯವಾಗಿ ಸಣ್ಣಪುಟ್ಟ ಹಡಗುಗಳು ಮಾತ್ರ ಸಂಚರಿಸುತ್ತವೆ. ಈ ಕಾಲುವೆಯಿಂದ ದೊಡ್ಡ ಹಡಗನ್ನು ಚಲಾಯಿಸಿ ಕೊಂಡು ಬರುವೆಂದರೆ ಅದು, ಸಣ್ಣ ಗಲ್ಲಿಯೊಳಗೆ ಬಸ್ಸೊಂದನ್ನು ಹಾಯಿಸಿಕೊಂಡು ಬಂದಂತೆ! ಈ ಸವಾಲನ್ನು ಬ್ರೆಮರ್‌ ಎಂಬ ಬೃಹತ್‌ ನೌಕೆಯ ಸಿಬಂದಿಯು ಯಶಸ್ವಿಯಾಗಿ ಸಾಧಿಸಿದ್ದಾರೆ. 642 ಅಡಿ ಉದ್ದ, 24,000 ಟನ್‌ ತೂಕವಿರುವ, 1,200 ಪ್ರಯಾಣಿಕರನ್ನು ಹೊಂದಿದ್ದ ಆ ಹಡಗು ನಿಧಾನವಾಗಿ ಈ ಕಿರಿದಾದ ಕಾಲುವೆಯಲ್ಲಿ ಸಾಗಿಬಂದಿದೆ. ಅದರ ವೀಡಿಯೋ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು, 7 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next