Advertisement
ಋತುಮಾನ ಬದಲಾದಂತೆ ಚಳಿ ಗಾಲದಲ್ಲಿ ಸಾಮಾನ್ಯವಾಗಿ ಹಳೆಯ ಎಲೆಗಳು ಉದುರಿ ಹೊಸ ಎಲೆಗಳು ಚಿಗುರಲಾರಂಭಿಸುತ್ತವೆೆ. ಅದ ರಂತೆ ತಿಂಗಳಿನಿಂದ ಈಚೆಗೆ ಎಲೆಗಳ ಉದುರುವಿಕೆ ಪ್ರಮಾಣ ಹೆಚ್ಚಾಗಿದ್ದು, ನಗರದಾದ್ಯಂತ ತರಗು ರಾಶಿಗೆ ಬೆಂಕಿ ಹಚ್ಚುವುದು, ದಟ್ಟ ಹೊಗೆ ಕಾಣಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ತರಗು ವಿಲೇವಾರಿಗೆ ಇದು ಸುಲಭ ಉಪಾಯ ವೆನಿಸಿದರೂ ಸಾರ್ವಜನಿಕರ ಆರೋಗ್ಯ ಮಾತ್ರವಲ್ಲದೆ ಪರಿಸರಕ್ಕೂ ಮಾರಕವಾಗಿ ಪರಿಣಮಿಸಿದೆ.
Related Articles
Advertisement
ಶ್ವಾಸಕೋಶ ಸುಡುತ್ತದೆ ಜೋಕೆ: ಎಲೆಗಳು ಹಾಗೂ ತ್ಯಾಜ್ಯಕ್ಕೆ ಬೆಂಕಿ ಹಾಕಿದರೆ ಅದರಿಂದ ಬರುವ ಹೊಗೆ, ಮನುಷ್ಯನ ಶ್ವಾಸಕೋಶಕ್ಕೆ ತೀವ್ರ ಹಾನಿಯುಂಟು ಮಾಡುತ್ತದೆ. ವಾತಾವರಣದಲ್ಲಿ ಈಗಾಗಲೇ ಧೂಳಿನ ಕಣಗಳು ಹೆಚ್ಚಾಗಿದ್ದು, ಅದರೊಂದಿಗೆ ಇಂಗಾಲ ಸೇರಿದರೆ ಮತ್ತಷ್ಟು ತೊಂದರೆಯಾಗುತ್ತದೆ. ಹೀಗಾಗಿ ಸಾರ್ವಜನಿಕರಾಗಲಿ, ಪೌರಕಾರ್ಮಿಕರಾಗಲಿ ಬೆಂಕಿ ಹಾಕಬಾರದು ಎಂದು ಪರಿಸರವಾದಿಗಳು ಹಾಗೂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಎಲೆ ಸಂಗ್ರಹಕ್ಕೆ ಪ್ರತ್ಯೇಕ ಕಾಂಪ್ಯಾಕ್ಟರ್: ಪಾಲಿಕೆ ವ್ಯಾಪ್ತಿ ಯಲ್ಲಿ ಹೆಚ್ಚಿನ ಉದ್ಯಾನಗಳು ಹಾಗೂ ಮರಗಳಿರುವ ವಾರ್ಡ್‌ಗಳಿಗೆ ಎಲೆ ತ್ಯಾಜ್ಯ ಸಂಗ್ರಹಕ್ಕೆಂದೇ ಪ್ರತ್ಯೇಕ ಕಾಂಪ್ಯಾಕ್ಟರ್ ಹಾಗೂ ಆಟೋ ಟಿಪ್ಪರ್‌ಗಳನ್ನು ನೀಡಲಾಗಿದೆ. ಜತೆಗೆ ಎಲೆಗಳಿಗೆ ಬೆಂಕಿ ಹಾಕುವುದರಿಂದ ಆಗುವ ತೊಂದರೆಗಳ ಕುರಿತಂತೆ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಟೀ ಅಂಗಡಿ, ಬೀದಿ ಬದಿ ವ್ಯಾಪಾರಿಗಳು ಬೆಂಕಿ ಹಾಕುತ್ತಿರುವುದು ಕಂಡು ಬಂದಿದೆ. ಹೀಗಾಗಿ ಅವರಿಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಘನ ತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಹತ್ತು ಸಿಗರೇಟು ಸೇದಿದಾಗ ಶ್ವಾಸಕೋಶದ ಮೇಲಾಗುವಷ್ಟು ಪರಿಣಾಮ, ಎಲೆ, ತ್ಯಾಜ್ಯಕ್ಕೆ ಬೆಂಕಿ ಹಾಕು ವುದರಿಂದ ಬರುವ ಹೊಗೆಯನ್ನು ಒಮ್ಮೆ ಸೇವಿಸುವುದರಿಂದ ಆಗುತ್ತದೆ. ಈ ಸಂಬಂಧ ಪೌರಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ನಾಗರಿಕರು ಸಹ ಎಲೆಗಳಿಗೆ ಬೆಂಕಿ ಹಾಕದೆ, ಗೊಬ್ಬರವಾಗಿ ಪರಿವರ್ತಿಸಬೇಕು.ಯಲ್ಲಪ್ಪರೆಡ್ಡಿ, ಪರಿಸರವಾದಿ