ಆರೋಗ್ಯವಂತ ತಾಯಂದಿರಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ.
Advertisement
ಎದೆಹಾಲು ಕ್ಲಪ್ತ ಸಮಯಕ್ಕೆ ದೊರೆಯದೆ ಆಗುವ ನವಜಾತ ಶಿಶುಮರಣ ತಡೆಯುವಲ್ಲಿ ಈ ಉಪಕ್ರಮದಿಂದ ನೆರವಾಗತೊಡಗಿದೆ.
ಲೇಡಿಗೋಶನ್ ಆಸ್ಪತ್ರೆಗೆ ಹಲವು ಜಿಲ್ಲೆಗಳಿಂದ ಹೆರಿಗೆಗಾಗಿ ಮಹಿಳೆಯರು ಬರುತ್ತಾರೆ. ಹೆರಿಗೆ ಸಂಖ್ಯೆ ಹೆಚ್ಚಿದಾಗ ತಾಯಂದಿರೂ ಹೆಚ್ಚುತ್ತಾರೆ. ಸಮಸ್ಯೆಯಿರುವ ಮಕ್ಕಳಿಗೆ ಇದೇ ತಾಯಂದಿರ ಹಾಲು ನೀಡಲಾಗುತ್ತದೆ. ದಾನಿಗಳಿಂದ ಸಂಗ್ರಹಿಸಲಾದ ಹಾಲನ್ನೂ ಇಲ್ಲಿ ಬಳಸುತ್ತಿದ್ದು, ಅಗತ್ಯವಿರುವಾಗ ವೆನಾÉಕ್‌ನ ಪ್ರಾದೇಶಿಕ ಮಕ್ಕಳ ಚಿಕಿತ್ಸಾ ಕೇಂದ್ರಕ್ಕೂ ಪೂರೈಸಲಾಗುತ್ತದೆ ಎನ್ನುತ್ತಾರೆ ವೈದ್ಯರು. ರಾಜ್ಯದಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಬಿಟ್ಟರೆ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಷ್ಟೇ ಈ ವಿಶಿಷ್ಟ ಪ್ರಯತ್ನ ನಡೆಸಿರುವುದು. ಕೆಲವು ಖಾಸಗಿ ಆಸ್ಪತ್ರೆಗಳು ಆರಂಭಿಸಿದ್ದರೂ ದಾನಿಗಳ ಕೊರತೆಯಿಂದಾಗಿ ಯಶಸ್ವಿಯಾಗಲಿಲ್ಲ.
Related Articles
ಆಸ್ಪತ್ರೆಗೆ ಬರುವ ಆರೋಗ್ಯವಂತ ತಾಯಂದಿರಿಗೆ ಆಸ್ಪತ್ರೆಯ ಸಿಬಂದಿ ಎದೆಹಾಲು ದಾನದ ಕುರಿತು ಅರಿವು ಮೂಡಿಸುತ್ತಾರೆ. ಹಾಲು ದಾನಿಗಳನ್ನು ನೋಡಿದ ಕೆಲವು ಅರ್ಹ ತಾಯಂದಿರು ಸ್ವಯಂ ಪ್ರೇರಿತವಾಗಿ ದಾನಕ್ಕೆ ಮುಂದಾಗುತ್ತಾರೆ. ಆ ಹಾಲನ್ನುಪ್ಯಾಶ್ಚರೀಕರಿಸಿ, ಸೋಂಕು ಮುಕ್ತಗೊಳಿಸಿ ಫ್ರೀಜರ್‌ನಲ್ಲಿ ಇರಿಸಲಾಗುತ್ತದೆ. ಬಳಿಕ ಅಗತ್ಯವಿರುವ ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಇತರ ಆಸ್ಪತ್ರೆಯವರಿಗೂ ಅಗತ್ಯವಿದ್ದಲ್ಲಿ ಕಳುಹಿಸಲಾಗುವುದು ಮಿಲ್ಕ್ ಬ್ಯಾಂಕ್ ನೋಡಲ್ ಅಧಿಕಾರಿ ಡಾ| ಬಾಲಕೃಷ್ಣ.
ಈಗಾಗಲೇ ಕೇಂದ್ರ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕ ಸಿಬಂದಿ ಒದಗಿಸುವಂತೆ ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Advertisement
ತನ್ನ ಶಿಶುವಿನ ಅಗತ್ಯಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗುವ ತಾಯಂದಿರು ಇದಕ್ಕೆ ಅರ್ಹರು. ಯಾವುದೇ ತಾಯಿ ಎದೆಹಾಲಿನ ದಾನಕ್ಕೆ ಆಸಕ್ತಳಾಗಿದ್ದಲ್ಲಿ ಲೇಡಿಗೋಶನ್ ಆಸ್ಪತ್ರೆಯ ಎದೆಹಾಲು ಬ್ಯಾಂಕನ್ನು ಸಂಪರ್ಕಿಸಬಹುದು. ತಜ್ಞರು ಅಗತ್ಯ ಮಾಹಿತಿಯನ್ನು ನೀಡುತ್ತಾರೆ ಎಂದು ಮಿಲ್ಕ್ ಬ್ಯಾಂಕ್‌ನ ಮೂಲಗಳು ತಿಳಿಸಿವೆ.
ಆರಂಭದಲ್ಲಿ ತಾಯಂದಿರು ಎದೆಹಾಲುದಾನಕ್ಕೆ ಹಿಂಜರಿಯು ತ್ತಿದ್ದರು. ಈಗ ಜಾಗೃತಿ ಮೂಡಿದೆ. ದೇಶದಲ್ಲೇ ಇದೊಂದು ವಿನೂತನ ಯತ್ನ. ನವಜಾತ ಶಿಶ ಮರಣ ತಡೆಯುವತ್ತ ಪ್ರಮುಖ ಪಾತ್ರ ವಹಿಸಿದೆ.– ಡಾ| ದುರ್ಗಾಪ್ರಸಾದ್, ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ ವೇಣುವಿನೋದ್ ಕೆ.ಎಸ್.