Advertisement

ಕನ್ಯಾನ ಪೇಟೆ: ಚಿಮ್ಮಿದ ಕಾರಂಜಿ!

11:39 PM Apr 25, 2019 | Team Udayavani |

ವಿಟ್ಲ: ಕನ್ಯಾನ ಗ್ರಾಮದ ಕೆಳಗಿನ ಪೇಟೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಒಡೆದು ನೀರು ಪೋಲಾಗಿ, ವಾಹನ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಕೆಳಗಿನಪೇಟೆಯಲ್ಲಿದ್ದ ಪೈಪ್‌ಲೈನ್‌ ಒಡೆದು ನೀರು ಕಾರಂಜಿಯಂತೆ ಚಿಮ್ಮಿದ್ದು, ಸುತ್ತಮುತ್ತಲಿನ ಅಂಗಡಿಯವರಿಗೆ, ರಸ್ತೆ ಯಲ್ಲಿ ಸಂಚಾರ ಮಾಡುತ್ತಿದ್ದವರಿಗೆ ವಾಹನ ಚಾಲಕರಿಗೆ ಮೈಮೇಲೆ ಬೀಳುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ ಬಳಿಕ ಅವರು ದುರಸ್ತಿ ಮಾಡಿದ್ದಾರೆ.

Advertisement

ನೀರಿನ ಸಮಸ್ಯೆ ನೀಗಿಸಲು ವಿಟ್ಲ ಪಟ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ 26 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನು ಷ್ಠಾನಗೊಂಡಿದ್ದು, ವಿದ್ಯುತ್‌ ಕಣ್ಣಾ ಮುಚ್ಚಾಲೆಯಿಂದ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದೆ. ಆದರೆ ಕಳೆದ ಕೆಲವು ದಿನಗಳಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ ಇಂದು ಕಳಪೆ ಕಾಮಗಾರಿಯ ಉದಾಹರಣೆಯಾಗಿ ಪೈಪ್‌ಲೈನ್‌ ಒಡೆದು ಸಾಕ್ಷಿ ನೀಡುತ್ತಿವೆ.

ಉತ್ತಮ ದರ್ಜೆಯ ಪೈಪ್‌ ಅಳವಡಿಸಲಾಗಿದ್ದರೂ ಜೋಡಿಸಿದ ರೀತಿ ವೈಜ್ಞಾನಿಕವಾಗಿಲ್ಲ. ಆದುದರಿಂದ ಎಷ್ಟೋ ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಇದೇ ರೀತಿ ಕನ್ಯಾನ ಗ್ರಾಮದ ಕಮ್ಮಜೆಯಲ್ಲಿ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next