Advertisement

ಮೌನ ಮುರಿದು ಮಾತನಾಡು

08:09 PM Jan 13, 2020 | mahesh |

ತಿಳಿಯದೇ ಮಾಡಿದ ತಪ್ಪಿಗೆ ಯಾರಿಗಾದರೂ ಕ್ಷಮೆ ಇರುತ್ತೆ. ಆದರೆ, ಎಲ್ಲವನ್ನೂ ತಿಳಿದೂ ನೀನು ಕ್ಷಮಿಸದೆ ಇರುವುದು ಸರಿಯಾ ಗೆಳತಿ. ಅಷ್ಟು ಸಲೀಸಾಗಿ ನಮ್ಮ ಈ ಮಧುರ ಸ್ನೇಹವನ್ನು ಮರೆತು ಬಿಟ್ಟೆಯಾ? ಮನುಷ್ಯ ತಪ್ಪು ಮಾಡುವುದು ಸಹಜ ಕಣೋ, ಅದನ್ನು ಕ್ಷಮಿಸಿ ನಡೆಯೋದು ಮನುಜ ಕಣೋ ಅಂತ ಈ ಹಿಂದೆ ನೀನೇ ತಮಾಷೆಯಾಗಿ ಹೇಳ್ತಾ ಇದ್ದೆ. ಆದರೆ, ಈಗ ಆ ಮಾತು ತಪ್ಪಿನಲ್ಲಿ ಮುಚ್ಚಿ ಹೋಗಿದೆ ಅನಿಸುತ್ತಿದೆ.

Advertisement

ನಿನಗೆ ನೆನಪಿದೆಯಾ? ಆಗತಾನೆ ಶುರುವಾದ ನಮ್ಮ ಸ್ನಾತಕೊತ್ತರ ವ್ಯಾಸಂಗವೇ ನಿನ್ನ ನನ್ನ ಸ್ನೇಹದ ದಡ. ತೊದಲು ನುಡಿಯಿಂದ ಪ್ರಾರಂಭವಾದ ಗೆಳೆತನ, ತಿಳಿಯದೆ ಆಕಾಶ ದಷ್ಟು ಬೆಳೆಯಿತು. ಕ್ಲಾಸು,ಫೆಷ್ಟು, ಸ್ಯಾರಿ ಡೇ , ಟ್ರೆಡೀಷನಲ್‌ ಡೇ, ಬ್ಲ್ಯಾಕ್‌ ಡೇ, ಗ್ರುಪ್‌ ಡೇಗಳಲ್ಲಿ ಮಾಡಿದ ಮೋಜು ಮಸ್ತಿ ಮರೆತೆಯಾ? ಸನ್ಸೆಟ್‌ ಪಾಯಿಂಟ್‌ ನಲ್ಲಿ ಮಾಡಿದ ನಮ್ಮ ಫೋಟೋ ಶೂಟ್‌ ಹೇಗೆ ಮೆರಯಲು ಸಾಧ್ಯ?

ಎರಡು ವರ್ಷದಿಂದ ನಿನ್ನ ಬಗ್ಗೆ ಸಂಪೂರ್ಣ ಅರಿತಿದ್ದೇನೆ. ಯಾವುದನ್ನೂ ಮುಚ್ಚಿಡುವ ಗುಣ ನಿನ್ನದಲ್ಲ. ಮಲೆನಾಡಿನ ಮೃದು ಮಾತಿನವಳು. ನಿನ್ನ ನಗು ಮುಖ, ಫ‌ಳ ಫ‌ಳ ಹೊಳೆಯುವ ಆ ಕಣ್ಣುಗಳು, ಅಕ್ಕರೆಯ ಮಾತುಗಳು ಎಲ್ಲವೂ ನನ್ನ ಕಣ್ಣ ಮುಂದೆ ಬಂದು ಕಾಡುತ್ತಿದೆ. ಆವತ್ತು ಸುಳ್ಳು ಹೇಳಿದ್ದು ನಾನೇ ಇರಬಹುದು. ಆದರೆ, ನಿನಗೆ ಸುಳ್ಳು ಹೇಳುವಂತೆ ಮಾಡಿದ್ದು, ಆಗ ನನ್ನ ಎದುರಿಗಿದ್ದ ಪರಿಸ್ಥಿತಿ. ದಯವಿಟ್ಟು ಅರ್ಥ ಮಾಡಿಕೋ. ಈ ಬದುಕು ಚಿಕ್ಕದು. ನನ್ನಿಂದ ದೂರವಾಗಿ ಅಥವಾ ನನ್ನನ್ನು ದೂರವಾಡಿ, ನೀನು ಸಾಧಿಸುವುದೇನು? ಇದಷ್ಟು ದಿನ ಜೊತೆಗಿರೋಣ.

ಮೌನ ಮುರಿದು ಮಾತನಾಡು. ನಿನ್ನ ಒಂದು ಸಂದೇಶಕ್ಕೆ ಕಾಯುತ್ತಿರುವೆ.

ಇಂತಿ ನಿನ್ನ ಗೆಳೆಯ

Advertisement

ವಿಜಯಕುಮಾರ ಎಸ್‌ ಬೆಳ್ಳೇರಿಮಠ

Advertisement

Udayavani is now on Telegram. Click here to join our channel and stay updated with the latest news.

Next