Advertisement
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದ ಹಾಗೂ ರಕ್ಷಕ-ಶಿಕ್ಷಕ ಸಂಘದ ನೇತƒತ್ವದಲ್ಲಿ ಬ್ರೇಕ್ ದ ಚೆ„ನ್ ಎಂಬ ಧ್ಯೇಯದೊಂದಿಗೆ ಶಾಲೆಯ ಸಮೀಪದ ಚಕ್ಕರ್ ಬಜಾರ್ ರಸ್ತೆ ಬದಿಯಲ್ಲಿ ಸ್ಥಾಪಿಸಲಾದ ನೀರಿನ ನಳ್ಳಿಯಲ್ಲಿ ಕೈ ತೊಳೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾ ಟೀಚರ್ ಮಾತನಾಡಿ ಕೊರೊನಾವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸರಕಾರದ ಆದೇಶವನ್ನು, ಸಲಹೆ-ಸೂಚನೆಗಳನ್ನು ಪಾಲಿಸುವುದು ಅತೀ ಅಗತ್ಯವಾಗಿದೆ. ಇದು ರೋಗ ಹರಡುವುದನ್ನು ತಡೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದುದರಿಂದ ಜನಸಾಮಾನ್ಯರಲ್ಲಿ ಎಚ್ಚರಿಕೆ ಮೂಡಿಸುವ ಜತೆಯಲ್ಲಿ ಕೈ ತೊಳೆಯುವ ಅಗತ್ಯ, ಮಹತ್ವವನ್ನರಿತು ಬ್ರೇಕ್ ದ ಚೆ„ನ್‌ನಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ನೆರವಾಗುವ ಪುಟ್ಟ ಪ್ರಯತ್ನವನ್ನು ಮಾಡಲು ಮುಂದಾಗಿದ್ದೇವೆ. ಇದರ ಪ್ರಯೋಜನ ಪಡೆದು ರೋಗಮುಕ್ತವಾಗಿಸಲು ಎಲ್ಲರೂ ಮುಂದಾಗಬೇಕು ಎಂ¨ದರು. ಎಸ್.ಎಂ.ಸಿ ಚೆಯರ್‌ಮನ್ ರಾಶಿದ್ ಪೂರಣಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಶಿಕ್ಷಕ ವೃಂದದವರು ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ಜಾಗ್ರತೆಯಿಂದ ಆರೋಗ್ಯ ರಕ್ಷಣೆ
ಶಾಲಾ ನೀರಿನ ಟ್ಯಾಂಕ್‌ನಿಂದ ನೀರಿನ ಸಂಪರ್ಕವಿರುವ ಈ ನಳ್ಳಿಯಲ್ಲಿ ದಿನದ 24 ಗಂಟೆಯೂ ನೀರು ಲಭ್ಯವಿದ್ದು ಜತೆಯಲ್ಲಿ ಸಾಬೂನು ಹಾಗೂ ಹ್ಯಾಂಡ್ ವಾಶ್ ದ್ರಾವಣವನ್ನು ನಳ್ಳಿಗೆ ನೇತು ಹಾಕಲಾಗಿದ್ದು ಶಾಲೆಯು ಬ್ರೇಕ್ ದ ಚೆ„ನ್‌ಗೆ ಮಹತ್ವದ ಕೊಡುಗೆಯನ್ನು ನೀಡಿದಂತಾಗಿದೆ.
Related Articles
– ಅನಿಲ್ ಕುಮಾರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ
Advertisement