ಕೊಳ್ಳೇಗಾಲ: ಪಟ್ಟಣದ ವಿವಿಧ ಮುಖ್ಯ ರಸ್ತೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ಬಿಡಾಡಿ ದನಗಳ ಕಾಟ ಹೆಚ್ಚಾಗಿದ್ದು, ಇದರಿಂದ ಪ್ರತಿನಿತ್ಯ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಬಿಡಾಡಿ ದನಗಳ ಹಾವಳಿಗೆ ಬ್ರೇಕ್ ಹಾಕಬೇಕು.
ನಗರಸಭೆಯಲ್ಲಿ ಒಟ್ಟು 31 ವಾರ್ಡುಗಳಿದ್ದು, ಕೆಲವು ವಾರ್ಡುಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಬಿಡಾ ಡಿ ದನಗಳ ಕಾಟ ಹೆಚ್ಚಾಗಿದ್ದು, ಪಾದಚಾರಿಗಳು, ವಾ ಹನ ಚಾಲಕರಿಗೆ ಹಾಗೂ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತಲೆನೋವಾಗಿ, ಪರಿಣಾಮಿಸಿದೆ.
ದನಗಳಿಂದ ಅಪಘಾತ: ಬಿಡಾಡಿ ದನಗಳ ಮಾಲೀ ಕರು ತಮ್ಮ ಹಸುಗಳಿಂದ ಬರುವ ಹಾಲನ್ನು ಸಂಜೆ ಮತ್ತು ಬೆಳಗ್ಗೆ ಎರಡು ಸಮಯದಲ್ಲಿ ಹಿಂಡಿಕೊಂಡು ಬಳಿಕ ಅದನ್ನು ಸುರಕ್ಷಿತ ಜಮೀನುಗಳಲ್ಲಿ ಹುಲ್ಲು ಮೇಯಿಸಬೇಕು. ಆದರೆ ದನ ಸಾಕುವ ಮಾಲೀಕರು ಅವುಗಳನ್ನು ರಸ್ತೆಗೆ ಬಿಡುವುದರಿಂದ ಸಾರ್ವಜನಿಕರಿಗೆ ದನಗಳ ಕಾಟದಿಂದ ಹಲವರು ತಿವಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಘಟನೆಗಳು ಸಂಭವಿಸಿದೆ.
ವಿದ್ಯಾರ್ಥಿಗಳಿಗೆ ಗಾಯ: ಸೈಕಲ್ನಲ್ಲಿ ಶಾಲೆಗೆ ತೆರಳುವ ವೇಳೆ ಬಿಡಾಡಿ ದನಗಳ ಅಡ್ಡಾದಿಡ್ಡಿಯ ಓಟಾಟದಿಂದಾಗಿ ಹಲವು ವಿದ್ಯಾರ್ಥಿಗಳು ಸೈಕಲ್ನಿಂದ ಬಿದ್ದು ಗಾಯಗೊಂಡಿದ್ದಾರೆ ಮತ್ತು ಕಾಲೇಜಿಗೆ ಬೈಕ್‌ಗಳಲ್ಲಿ ತೆರಳುವ ವಿದ್ಯಾರ್ಥಿಗಳು ಸಹ ಬಿಡಾಡಿ ದನಗಳ ಕಾಟದಿಂದ ಬಿದ್ದು, ಗಾಯಗೊಂಡು ಚಿಕ್ಸಿತೆಗೆ ಒಳಗಾಗಿರುವ ಪ್ರಸಂಗಗಳು ನಡೆದಿದೆ.
ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ತೊಂದರೆ: ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸಲು ಸಾರ್ವಜನಿಕರು ಮತ್ತು ವಯಸ್ಸಾದ ವೃದ್ಧರು ಆಗಮಿಸುತ್ತಾರೆ. ಬಿಡಾಡಿಗಳ ದನಗಳು ತರಕಾರಿ ತಿನ್ನುವ ಸಲುವಾಗಿ ರಭಸವಾಗಿ ಬಂದು ತಕರಾರಿಗಳಿಗೆ ಬಾಯಿ ಹಾಕುತ್ತಿದ್ದಂತೆ ಕೊಂಬಿನಿಂದ ತರಕಾರಿಯನ್ನು ಬಿಸಾಡಿ ತರಕಾರಿ ಮಾಲೀಕರಿಗೆ ಅಪಾರ ನಷ್ಟ ಉಂಟು ಮಾಡಿವೆ. ಬಿಡಾಡಿಗಳ ದನಗಳನ್ನು ಹಿಡಿದು ಪಿಂಜ ರೋಪೋಲಿಗೆ ಕಳುಹಿಸುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡದೆ ವ್ಯಾಪಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆಂದು ಇಡೀ ಶಾಪ ಹಾಕುತ್ತಿದ್ದಾರೆ.
ವಾಹನಗಳ ತಡೆ: ಹಸುಗಳು ಮುಖ್ಯ ರಸ್ತೆಯಲ್ಲಿ ನಿಂತು ಪೊಲೀಸಪ್ಪನಂತೆ ಟ್ರಾಫಿಕ್‌ನಲ್ಲಿ ತೊಡಗಿರುವ ಮಾದರಿಯಲ್ಲಿ ನಿಂತೊಡೆದೆ ಅದನ್ನು ಜಗ್ಗಿಸಲು ಆಗುವುದಿಲ್ಲ. ವಾಹನ ಸವಾರರು ಶಬ್ದ ಮಾಡಿದರೂ ಸಹ ಜಪ್ಪಯ್ಯ ಅನ್ನದ ಬೀಡಾಡಿ ದನಗಳು ರಸ್ತೆಯಲ್ಲೇ ಶಿಲೆಯಂತೆ ನಿಂತು ವಾಹನ ಸವಾರರಿಗೆ ಅವಾಂತರ ಸೃಷ್ಟಿ ಮಾಡುತ್ತಿದೆ.
ರಾತ್ರಿಯ ಹೊತ್ತು ರಸ್ತೆಯಲ್ಲೇ ಮಲಗುವ ದನಗಳು: ಮುಖ್ಯ ರಸ್ತೆಗಳಲ್ಲಿ ರಾತ್ರಿಯ ಹೊತ್ತು ರಸ್ತೆಯಲ್ಲಿ ಮಲಗುವ ಬಿಡಾಡಿ ದನಗಳಿಂದಾಗಿ ಕತ್ತಲೆಯಲ್ಲಿ ಬರುವ ವಾಹನ ಸವಾರರಿಗೆ ಗೊತ್ತಾಗದೆ ದನಗಳಿಗೆ ಗುದ್ದಿರುವ ಅನೇಕ ಘಟನೆ ಸಂಭವಿಸಿವೆ. ರಾತ್ರಿಯ ವೇಳೆ ಬೀಡಾಡಿ ದನಗಳನ್ನು ರಸ್ತೆಗೆ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ನಗರಸಭೆಗೆ ಒತ್ತಾಯಿಸಿದ್ದಾರೆ.
● ಡಿ.ನಟರಾಜು