ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಗಣೇಶೋತ್ಸವ ಮೆರವಣೆಯ ವೇಳೆ ಡಿಜೆ ಸೌಂಡ್ ಸಿಸ್ಟಮ್ ಬಳಕೆ ಮಾಡದಂತೆ ಜಿಲ್ಲಾ ವರಿಷ್ಟಾಧಿಕಾರಿ ಕೆ.ಸಂತೋಷ ಬಾಬು ಸೌಂಡ್ ಸಿಸ್ಟಮ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ ಗಣೇಶೋತ್ಸವ ಮೆರವಣಿಗೆ ಕಾರ್ಯಕ್ರಮಗಳು ಕೋಮು ದಳ್ಳುರಿಗೆ ಸಾಕ್ಷಿಯಾಗಿರುವ ಹಿನ್ನಲೆಯಲ್ಲಿ ಈ ವರ್ಷ ಚತುರ್ಥಿ, ಮೊಹರಂ ಒಂದರ ಹಿಂದೆ ಬಂದಿರುವುದರಿಂದ ಜಿಲ್ಲೆಯಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ತಡೆಯಲು ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧ್ಯಂತ ಒಟ್ಟು 500 ಕ್ಕೂ ಹೆಚ್ಚು ಪೊಲೀಸ್ ಪೇದೆಗಳನ್ನು ಹಾಗೂ 650 ಕ್ಕೂ ಗೃಹ ರಕ್ಷಕ ಸಿಬ್ಬಂದಿಯನ್ನು ಹಾಗೂ ಹೆಚ್ಚುವರಿಯಾಗಿ 4 ಕೆಎಸ್ಆರ್ ಪಿ ತುಕಡಿಗಳನ್ನು ಹಾಗೂ 10 ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ ಎಂದರು.
1654 ಗಣಪತಿಗಳ ಪ್ರತಿಷ್ಟಾಪನೆ..
ಜಿಲ್ಲೆಯಲ್ಲಿ ಈ ಬಾರಿ ಆರು ತಾಲೂಕುಗಳಲ್ಲಿ ಒಟ್ಟು 1654 ಗಣಪತಿಗಳ ಪ್ರತಿಷ್ಟಾಪನೆಗೊಳ್ಳಲಿವೆ ಎಂದರು. ಒಟ್ಟು ಆರು ಹಂತದಲ್ಲಿ ವಿಸರ್ಜನೆಯಾಗಲಿವೆ ಎಂದರು.