Advertisement

ಎಡಿಎಂಕೆಯಲ್ಲಿ ಬಿರುಕು?

12:18 AM Jun 10, 2019 | Sriram |

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಮದುರೆಯ ಶಾಸಕ ವಿ.ವಿ. ರಾಜನ್‌ ಚೆಲ್ಲಪ್ಪ ಏಕೈಕ ನಾಯಕ ತ್ವದ ಅಡಿ ಪಕ್ಷ ಇರಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ 12ರಂದು ಪಕ್ಷದ ಹಿರಿಯ ನಾಯ ಕರು, ಶಾಸಕರು ಮತ್ತು ಜಿಲ್ಲಾ ನಾಯಕರ ಸಭೆ ನಡೆಯಲಿದೆ. ಪಕ್ಷದ ಸಂಚಾಲಕ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಜತೆಗೆ ನಡೆದ 22 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲ್ಲಲು ಸಾಧ್ಯವಾದದ್ದು ಕೇವಲ 9 ಸ್ಥಾನಗಳು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಭಿನ್ನಧ್ವನಿ ಕೇಳಲಾರಂಭಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next