Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಅಧಿಕಾರ ಸ್ವೀಕರಿಸುವ ಮುಂಚೆ, ಹಿಂದಿನ ಸರ್ಕಾರ ಆನ್‌ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಈ ಅದನ್ನು ನಿಲ್ಲಿಸುವಂತೆ ಸೂಚಿಸಿದ್ದೇನೆ. ಹಿಂದೆ ಅನುಮತಿ ಕೊಟ್ಟಿರುವ ಫೈಲ್ ಹಿಡಿದು ಕೊಂಡು ಬರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಶಿರಾಳಕೊಪ್ಪದಲ್ಲಿ ಮುಖ್ಯಮಂತ್ರಿ ಎಚ್‌ಡಿಕೆ ಅವರು ಪ್ರಚಾರ ಸಭೆ ನಡೆಸಿದ ದಿನ ಬರೋಬ್ಬರಿ 1500 ಲೀಟರ್ ಮದ್ಯ ಮಾರಾಟವಾಗಿದೆ ಎಂದು ಜಿಲ್ಲಾಧಿಕಾರಿಗೆ ಬಿಜೆಪಿ ದೂರು ನೀಡಿತ್ತು. ದೂರನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಮದ್ಯದ ಅಂಗಡಿಗೆ ನೊಟೀಸ್ ನೀಡಿದ್ದಾರೆ.
Related Articles
ನಾನು ಪ್ರಚಾರಕ್ಕೆ ಹೋಗಿ ಬಂದ ಬಳಿಕ ಬಿಜೆಪಿಯವರು ಗಾಬರಿಗೊಂಡಿದ್ದಾರೆ. ಪಕ್ಷದ ಬಿಜೆಪಿ ನಾಯಕರೆಲ್ಲ ಸೇರಿ ಹೆಚ್ಚಿನ ರೀತಿ ಮದ್ಯದ ಮೂಲಕ ಮತದಾರರಿಗೆ ಆಮಿಷ ನೀಡಲು ಮುಂದಾಗಿದ್ದಾರೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
Advertisement