ಬ್ರೆಡ್ ಹಾಳೆಗಳು-5 6, ಹಾಲು-4 ಕಪ್, ಸಕ್ಕರೆ-2ಕಪ್, ತುಪ್ಪದಲ್ಲಿ ಹುರಿದ ಬಾದಾಮಿ ತುಂಡುಗಳು-6, ತುಪ್ಪದಲ್ಲಿ ಹುರಿದ ಗೋಡಂಬಿ7-8, ತುಪ್ಪದಲ್ಲಿ ಹುರಿದ ದ್ರಾಕ್ಷಿ-7-8, ಏಲಕ್ಕಿ ಪುಡಿ-1/2 ಚಮಚ, ಜಾಕಾಯಿ ಪುಡಿ-1/4 ಚಮಚ, ಕೇಸರಿ ಬಣ್ಣ-1/4 ಚಮಚ.
Advertisement
ಮಾಡುವ ವಿಧಾನ:ಕೇಸರಿ ಬಣ್ಣವನ್ನು ಕಾಲು ಕಪ್ ಹಾಲಿನಲ್ಲಿ ಕರಗಿಸಿಡಿ, ಬ್ರೆಡ್ ಹಾಳೆಗಳ ಅಂಚು ತೆಗೆದು, ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಹಾಲನ್ನು ಕಾಯಲಿರಿಸಿ, ಆರ್ಧಕ್ಕೆ ಇಂಗುವ ವರೆಗೆ ಕುದಿಸಿ, ಸಕ್ಕರೆ, ಬ್ರೆಡ್ ತುಂಡುಗಳನ್ನು ಸೇರಿಸಿ ಕಲಕಿ. ಒಲೆಯಿಂದ ಕೆಳಗಿರಿಸಿ, ತಣಿದ ಮೇಲೆ, ದ್ರಾಕ್ಷಿ ಗೋಡಂಬಿ ಬಾದಾಮಿ, ಏಲಕ್ಕಿ, ಜಾಕಾಯಿಗಳನ್ನು ಹಾಕಿದರೆ. ರುಚಿ ರುಚಿಯಾದ ಬ್ರೆಡ್ ಕೇಸರಿ ಬಾತ್ ತಯಾರು.