ಬ್ರೆಡ್ ಹಾಳೆಗಳು-5-6, ಚಿರೋಟಿ ರವೆ-2 ಕಪ್, ಅಕ್ಕಿ ಹಿಟ್ಟು-1 ಕಪ್, ಕಡಲೆ ಹಿಟ್ಟು- 1/4 ಕಪ್, ಸಣ್ಣಗೆ ಕತ್ತರಿಸಿದ ಈರುಳ್ಳಿ-1 ಕಪ್, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ-4, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು-1/2 ಕಪ್, ಸಣ್ಣಗೆ ಕತ್ತರಿಸಿದ ಪುದಿನಾ ಸೊಪ್ಪು- 1/4 ಕಪ್, ತುರಿದ ಹಸಿ ಶುಂಠಿ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-1/2 ಕಪ್.
ಮಾಡುವ ವಿಧಾನ:
ಬ್ರೆಡ್ ಹಾಳೆಗಳಿಗೆ ನೀರು ಚಿಮುಕಿಸಿಡಿ. ಚಿರೋಟಿ ರವೆ, ಅಕ್ಕಿ ಹಿಟ್ಟು, ಕಡಲೆ ಹಿಟ್ಟುಗಳನ್ನು ಸೇರಿಸಿ ನುಣ್ಣಗೆ ದೋಸೆಯ ಹದಕ್ಕೆ ಅರೆದಿಡಿ. ನೆನೆಸಿ ಇರಿಸಿದ ಬ್ರೆಡ್ ಹಾಳೆಗಳು ಹಾಗೂ ಮಿಕ್ಕೆಲ್ಲಾ ಸಾಮಾನುಗಳನ್ನು ಅರೆದ ಮಿಶ್ರಣಕ್ಕೆ ಸೇರಿಸಿ, ಅರ್ಧ ಗಂಟೆ ನೆನೆಯಲಿರಿಸಿ. ಕಾಯಿಸಿದ ಕಾವಲಿಯ ಮೇಲೆ ಎಣ್ಣೆ ಸವರಿ ದೋಸೆಯ ಹಿಟ್ಟನ್ನು ಸಮನಾಗಿ ಹರಡಿ. ಎರಡೂ ಬದಿಗಳನ್ನು ಬೇಯಿಸಿ ತೆಗೆದರೆ ರುಚಿಯಾದ ಬ್ರೆಡ್ ದೋಸಾ ರೆಡಿ. ಕಾಯಿ ಚಟ್ನಿಯೊಂದಿಗೆ ಸವಿಯಿರಿ.
Advertisement