ಬ್ರೆಡ್ ತುಂಡುಗಳು-2 ಕಪ್, ಖಾರಾಸೇವು-1 ಕಪ್, ಕತ್ತರಿಸಿದ ಈರುಳ್ಳಿ-1, ಕತ್ತರಿಸಿದ ಹಸಿಮೆಣಸಿನಕಾಯಿ-7-8 ತುಂಡುಗಳು, ಕತ್ತರಿಸಿದ ಟೊಮೆಟೊ ಹೋಳುಗಳು-1 ಕಪ್, ಕತ್ತರಿಸಿದ ಆಲೂಗಡ್ಡೆ ಹೋಳುಗಳು-1 ಕಪ್, ತೆಂಗಿನಕಾಯಿ ತುರಿ- 1 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/2 ಕಪ್, ಕತ್ತರಿಸಿದ ಪುದಿನಾ ಸೊಪ್ಪು-1/2 ಕಪ್, ಶುಂಠಿ ತುರಿ-1 ಚಮಚ, ಚಾಟ್ ಮಸಾಲೆ-3 ಚಮಚ,
ನಿಂಬೆರಸ-1 ಚಮಚ, ಹುಣಸೆ ರಸ-2 ಚಮಚ, ಜೀರಿಗೆ ಪುಡಿ-3 ಚಮಚ,
ಎಣ್ಣೆ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1 ಚಮಚ
Advertisement
ಮಾಡುವ ವಿಧಾನ:ಆಲೂಗಡ್ಡೆ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ ಹೋಳುಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ, ಶುಂಠಿ ತುರಿ, ಜೀರಿಗೆ ಪುಡಿ, ಹುಣಸೆ ರಸ,
ನಿಂಬೆರಸ, ಸಕ್ಕರೆ, ಉಪ್ಪು ಚಾಟ್ ಮಸಾಲೆ ಹಾಕಿ ಕಲಕಿ ಒಲೆಯಿಂದ ಕೆಳಗಿರಿಸಿ. ಈ ಮಿಶ್ರಣಕ್ಕೆ, ಬ್ರೆಡ್ ತುಂಡುಗಳು, ಖಾರಾ ಸೇವು ಹಾಕಿ ಚೆನ್ನಾಗಿ ಕಲಕಿ. ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪುಗಳಿಂದ ಅಲಂಕರಿಸಿ, ರುಚಿಯಾದ ಬ್ರೆಡ್ ಚಾಟ್ ಸರ್ವ್ ಮಾಡಿ.