Advertisement
ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆರ್. ರಾಮಚಂದ್ರಯ್ಯ, ಜಿಪಂ ಸದಸ್ಯರಾದ ಹುಳಿಯಾರು ಕ್ಷೇತ್ರದ ಸಿದ್ಧರಾಮಯ್ಯ ಮತ್ತು ಶೆಟ್ಟಿಕೆರೆ ಕ್ಷೇತ್ರದ ಕಲ್ಲೇಶ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಜಿಪಂ ಸದಸ್ಯರನ್ನು ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
Related Articles
Advertisement
ಸಚಿವರ ಸರ್ವಾಧಿಕಾರ ಧೋರಣೆ: ಸಭೆ ಯಲ್ಲಿ ಈ ಬಗ್ಗೆ ಸಚಿವ ಮಾಧುಸ್ವಾಮಿ ಯವರನ್ನು ಪ್ರಶ್ನೆ ಮಾಡಿದರೆ ಮೌನವಹಿಸು ತ್ತಾರೆ. ನಮಗೆ ಅಗೌರವ ತೋರಿರುವ ಸಭೆ ಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಸಭೆಯಿಂದ ಹೊರ ನಡೆಯುತ್ತೇವೆ ಎಂದರೆ ಸಚಿವರು ಹೋಗಿ ಎನ್ನುತ್ತಾರೆ. ಆದ್ದರಿಂದ ನಾವು ಸಭೆ ಬಹಿಷ್ಕಾರ ಮಾಡಿ ಹೊರ ಬಂದೆವು. ಇದು ಸಚಿವರ ಸರ್ವಾಧಿಕಾರ ಧೋರಣೆ ಎಂದು ದೂರಿದರು.
ನಾವು ಚುನಾಯಿತ ಪ್ರತಿನಿಧಿಗಳು, ನಮ್ಮ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಬಗ್ಗೆ ಸಾರ್ವ ಜನಿಕರು ಪ್ರಶ್ನಿಸುತ್ತಾರೆ. ಹೀಗಿರುವಾಗ ನಾವು ಸಾರ್ವಜನಿಕರಿಗೆ ಏನು ಉತ್ತರ ಕೊಡುವುದು, ನಮ್ಮನ್ನು ತಾಲೂಕು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಸಚಿವರ ಕೈಗೊಂಬೆಯಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ರೀತಿ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಾ ಹೋದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ ಅಧಿಕಾರಿಗಳ ಸರ್ವಾಧಿಕಾರ ಧೋರಣೆ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗು ತ್ತದೆ ಎಂದು ಎಚ್ಚರಿಸಿದರು
ಕಾನೂನು ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ತಮ್ಮಂ ತೆಯೇ ಜನರಿಂದ ಆಯ್ಕೆಯಾಗಿ ರುವ ಪ್ರತಿನಿಧಿ, ನಾವೂ 45 ಸಾವಿರ ಜನರನ್ನು ಪ್ರತಿನಿಧಿಸುವ ಜಿಪಂ ಸದಸ್ಯರು, ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರಿಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. -ಸಿದ್ದರಾಮಯ್ಯ, ಜಿಪಂ ಸದಸ್ಯ