ಇಂತಹ ಪರಿಸ್ಥಿತಿಯ ತೀವ್ರತೆಯನ್ನು ಅರಿತ ಬ್ರಝಿಲ್‌ನ ಉದ್ಯಮಿಯೊಬ್ಬರು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದು, “ಹಗ್ ಕರ್ಟನ್’ ಎಂಬ ಸುರಕ್ಷಿತ ಕವಚವನ್ನು ತಯಾರಿಸಿದ್ದಾರೆ.
Advertisement
ಸಾಕಷ್ಟು ಜನರು ಲಾಕ್‌ಡೌನ್ ವೇಳೆ ತಮ್ಮ ಪ್ರೀತಿ ಪಾತ್ರರಾದವರನ್ನು ಸನಿಹದಿಂದ ನೋಡಲಾಗದೇ ಬೇಸರಗೊಂಡಿದ್ದಾರೆ. ಮಾತ್ರವಲ್ಲದೇ ತಮ್ಮ ತೀರಾ ಹತ್ತಿರ ಸಂಬಂಧಿಗಳೂ ಚಿಕಿತ್ಸೆಗೆ ಒಳಗಾಗುತ್ತಿದ್ದ ವೇಳೆ ಅವರ ಬಳಿ ಇದ್ದು ಹಾರೈಕೆ ಮಾಡಲಾಗದೇ ವ್ಯಥೆ ಪಟ್ಟಿದ್ದಾರೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು “ಹಗ್ ಕಾರ್ಟನ್’ ಸಿದ್ಧಪಡಿಸಲಾಗಿದೆ ಎಂದು ಉದ್ಯಮಿ ಹೇಳಿದ್ದಾರೆ.
ಬ್ರಝಿಲ್‌ನ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ವರ್ಷದ ಡಿಸರ್ ಎಂಬ ಅಜ್ಜಿ 70 ದಿನಗಳ ಬಳಿಕ ಮೊದಲ ಬಾರಿಗೆ ತನ್ನ ಮಗಳನ್ನು ಭೇಟಿಯಾಗಿದ್ದು, “ಹಗ್ ಕಾರ್ಟನ್’ ಧರಿಸುವ ಮೂಲಕ ತಮ್ಮ ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಸಾಮಾಜಿಕ ಅಂತರ ನಿಯಮವೂ ಪಾಲನೆಯೊಂದಿಗೆ ಪ್ರೀತಿ ಪಾತ್ರರನ್ನು ಸನಿಹದಿಂದ ನೋಡಲು ಅವಕಾಶ ಮಾಡಿಕೊಟ್ಟ ಉದ್ಯಮಿಯ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರು ಕೂಡ “ಹಗ್ ಕಾರ್ಟನ್’ ಬಳಕೆಗೆ ಅರ್ಹ ಎಂದು ಹೇಳಿದ್ದಾರೆ.