Advertisement

ಕೆಲ ತಿಂಗಳಿಂದ ನಾಪತ್ತೆಯಾಗಿದ್ದ ಬ್ರೆಜಿಲ್‍ನ ನಟ ಶವವಾಗಿ ಪತ್ತೆ

01:48 PM May 27, 2023 | Team Udayavani |

ರಿಯೊ ಡೆ ಜನೈರೊ: ಕೆಲ ತಿಂಗಳಿಂದ ನಾಪತ್ತೆಯಾಗಿದ್ದ ಬ್ರೆಜಿಲ್‍ನ ಖ್ಯಾತ ನಟ ಜೆಫರ್ಸನ್ ಮಚಾಡೊ ಅವರು ರಿಯೊ ಡಿ ಜನೈರೊದಲ್ಲಿನ ಮನೆಯ ಹೊರಗೆ ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Advertisement

ಅವರ ಕುಟುಂಬ ಸ್ನೇಹಿತೆ ಸಿಂತಿಯಾ ಹಿಲ್ಸೆಂಡೆಗರ್ ಇನ್‌ಸ್ಟ್ರಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ನಟ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ. ” 05/22/2023ರಂದು ಜೆಫ್ ನಿರ್ಜೀವವಾಗಿ ಪತ್ತೆಯಾಗಿದ್ದಾರೆ ಎಂದು ನಾವು ಬಹಳ ದುಃಖದಿಂದ ಪ್ರಕಟಿಸುತ್ತಿದ್ದೇವೆ” ಎಂದು ಪೋಸ್ಟ್ ಮಾಡಿದ್ದಾರೆ.

44 ವರ್ಷದ ಮೃತದೇಹವನ್ನು ಕಾಂಕ್ರೀಟ್‌ನಿಂದ ಮುಚ್ಚಿದ ಮರದ ಪೆಟ್ಟಿಗೆಯೊಳಗೆ ಸರಪಳಿಯಲ್ಲಿ ಬಂಧಿಸಿ ಪ್ಯಾಕ್ ಮಾಡಲಾಗಿದ್ದು, ಮನೆಯ ಹಿತ್ತಲಿನ ಕೆಳಗೆ ಆರು ಅಡಿ ಹೂತು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಅವರ ಕೈಯನ್ನು ತಲೆಯ ಹಿಂದೆ ಕಟ್ಟಿಹಾಕಲಾಗಿತ್ತು. ಅವರ ಮನೆಯಲ್ಲೇ ಇದ್ದ ಪೆಟ್ಟಿಗೆಯನ್ನು ಹೋಲುವ ಪೆಟ್ಟಿಗೆಯಲ್ಲಿ ಹೂತಿಡಲಾಗಿತ್ತು” ಎಂದು ಕುಟುಂಬದ ವಕೀಲ ಜೈರೊ ಮ್ಯಾಗಲ್ಹೇಸ್ ಹೇಳಿದ್ದಾರೆ.

ಬೆರಳಚ್ಚು ಮತ್ತು ಅವರ ಕತ್ತಿನಲ್ಲಿದ್ದ ರೇಖೆಯ ಆಧಾರದಲ್ಲಿ ದೇಹವನ್ನು ಗುರುತಿಸಲಾಗಿದ್ದು, ಅವರನ್ನು ಉಸಿರುಗಟ್ಟಿಸಿ ಸಾಯಿಸಿರುವ ಸಾಧ್ಯತೆ ಇದೆ ಎಂದು ವಕೀಲರು ತಿಳಿಸಿದ್ದಾರೆ.

Advertisement

ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ ಆರ್‌ಜೆ ಟೌನ್‌ಶಿಪ್ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಸಣ್ಣ ಪುಟ್ಟ ಮಾಹಿತಿಗಳ ಮೂಲಕ ನೆರವಾದ ಎಲ್ಲರಿಗೂ ಧನ್ಯವಾದಗಳು ಎಂದು ಕುಟುಂಬ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next