ಸಾವೋ ಪೌಲೊ (ಬ್ರಝಿಲ್): ಲೆಜೆಂಡ್ರಿ ಫುಟ್ಬಾಲಿಗ, 3 ಬಾರಿಯ ವಿಶ್ವಕಪ್ ವಿಜೇತ ಬ್ರಝಿಲ್ ತಂಡದ ಸದಸ್ಯ ಪೀಲೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿರುವ ಬಗ್ಗೆ ವರದಿಗಳು ಬರುತ್ತಿವೆ. ಅವರನ್ನು ದಾಖಲಿಸಲಾ ಗಿರುವ ಸಾವೊ ಪೌಲೋದ “ಆಲ್ಬರ್ಟ್ ಐನ್‌ಸ್ಟಿನ್ ಹಾಸ್ಪಿಟಲ್’ನಲ್ಲಿ ಕುಟುಂಬದ ಸದಸ್ಯರೆಲ್ಲ ನೆರೆದಿದ್ದಾರೆ. ಇವರನ್ನು ಒಳಗೊಂಡಿರುವ ಗ್ರೂಪ್ ಫೋಟೊ ಒಂದು ಎಲ್ಲೆಡೆ ಹರಿದಾಡುತ್ತಿದೆ.
“ಕ್ಯಾನ್ಸರ್ ಅವರ ದೇಹದೆಲ್ಲೆಡೆ ಹಬ್ಬುತ್ತಿದೆ. ಇದರಿಂದ ಹೃದಯ ಹಾಗೂ ಮೂತ್ರಪಿಂಡಗಳ ಕಾರ್ಯ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಅವರಿಗೆ ಉನ್ನತ ಮಟ್ಟದ ಚಿಕಿತ್ಸೆಯನ್ನು ಮುಂದು ವರಿಸಲಾಗುತ್ತಿದೆ’ ಎಂಬುದಾಗಿ ಪೀಲೆ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಕೆಲವು ದಿನಗಳ ಹಿಂದೆ ತಿಳಿಸಿದ್ದರು. ಅನಂತರ ಯಾವುದೇ ಹೇಳಿಕೆ ಬಂದಿಲ್ಲ.
82 ವರ್ಷದ ಪೀಲೆ ಅವರನ್ನು ನವೆಂಬರ್‌ನಲ್ಲೇ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಸದ್ಯ ಅವರಿಗೆ ಕಿಮೊಥೆರಪಿಯನ್ನು ಮುಂದುವರಿಸಲಾಗಿದೆ. ಆದರೆ ಕಿಮೊ ಥೆರಪಿ ಕೂಡ ಪರಿಣಾಮ ಬೀರುತ್ತಿಲ್ಲ ಎಂಬ ಕೆಲವು ದಿನಗಳ ಹಿಂದಿನ ವೈದ್ಯರ ವರದಿಯನ್ನು ಪೀಲೆ ಕುಟುಂಬ ನಿರಾಕರಿಸಿತ್ತು.
ವೈದ್ಯರ ಮೇಲೆ ಭಾರ
ಆಸ್ಪತ್ರೆಗೆ ಆಗಮಿಸಿದವರಲ್ಲಿ “ಎಡಿನೊ’ ಎಂದೇ ಕರೆಯಲ್ಪಡುವ, ಪೀಲೆ ಅವರ ಪುತ್ರ ಎಡ್ಸನ್ ಕೊಲ್ಬಿ ನಶಿಮೆಂಟೊ ಕೂಡ ಒಬ್ಬರು. ನಾವು ಎಲ್ಲ ಭಾರವನ್ನು ವೈದ್ಯರ ಮೇಲೆ ಹಾಕಿದ್ದೇವೆ ಎಂಬುದಾಗಿ ಅವರು ಹೇಳಿಕೆ ನೀಡಿದ್ದಾರೆ. ಎಡಿನೊ ದಕ್ಷಿಣ ಬ್ರಝಿಲ್‌ನ ಸಾಕರ್ ಕ್ಲಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಪುತ್ರಿ ಕೆಲಿ ನಶಿಮೆಂಟೊ, ಕುಟುಂಬ ಸಮೇತ ಆಸ್ಪತ್ರೆಯ ನೆಲದಲ್ಲಿ ಕುಳಿತ ಚಿತ್ರವೊಂದನ್ನು ಸಾಮಾಜಿಕ ಜಾಲತಾ ಣದಲ್ಲಿ ಪೋಸ್ಟ್ ಮಾಡಿದ್ದಾರೆ.