ಬ್ರೆಜಿಲ್: ಬ್ರೆಜಿಲ್‌ನ ಆಗ್ನೇಯ ಸಾವೊ ಪಾಲೊ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 65 ಕ್ಕೆ ಏರಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ 19 ಅಪ್ರಾಪ್ತ ವಯಸ್ಕರು ಸೇರಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ, “ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಮುಂದುವರೆದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೇನಾ ಪಡೆಗಳು, ಅಗ್ನಿಶಾಮಕ ದಳದವರು, ಸ್ವಯಂಸೇವಕರು ಮತ್ತು ರಕ್ಷಣಾ ಕಾರ್ಯಕರ್ತರು ಮೃತರ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು ಭೂ ಕುಸಿತದಿಂದ ಕಾಣೆಯಾದವರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಬಲಿಪಶುಗಳಲ್ಲಿ ಹೆಚ್ಚಿನವರು ಸಾವೊ ಸೆಬಾಸ್ಟಿಯಾವೊದಲ್ಲಿನ ಸಮೀಪವಿರುವ ಸಿಯೆರಾ ಡಿ ಮಾರ್ ಪರ್ವತ ಶ್ರೇಣಿಯ ಬಳಿ ಇರುವ ನಿವಾಸಿಗಳಾಗಿದ್ದಾರೆ.
ಇದನ್ನೂ ಓದಿ: ಆಶ್ಲೀಲ ವಿಡಿಯೋ ಕೇಸ್ ಬಳಿಕ ಮೊದಲ ಬಾರಿ ಮಾಸ್ಕ್ ಇಲ್ಲದೆ ಕಾಣಿಸಿಕೊಂಡ ರಾಜ್ ಕುಂದ್ರಾ
ಭಾನುವಾರ, ಭೂಕುಸಿತದಿಂದ ಮುಚ್ಚಿದ ರಸ್ತೆಗಳನ್ನು ಮತ್ತೆ ತೆರವುಗೊಳಿಸಲಾಗಿದ್ದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.