Advertisement
ಬ್ರಿಟನ್ನಿನ ಪ್ರಮುಖ ಬುಕ್‌ವೆುಕರ್ ವಿಲಿಯಂ ಹಿಲ್ ಇದರಲ್ಲಿ ಮುಂಚೂಣಿಯಲ್ಲಿದ್ದಾನೆ. ಈತನ ಪ್ರಕಾರ ಬ್ರಝಿಲ್ ಈ ಕೂಟದ ಚಾಂಪಿಯನ್ ಆಗಲಿದೆ. ಬ್ರಝಿಲ್‌ಗೆ ನೀಡಿದ “ರೇಟಿಂಗ್’ 4/1. ಅನಂತರದ ಸ್ಥಾನ ಜರ್ಮನಿಗೆ ನೀಡಲಾಗಿದೆ (9/2). ಕೂಟದ 3ನೇ ಫೇವರಿಟ್ ತಂಡ 1998ರ ಚಾಂಪಿಯನ್ ಫ್ರಾನ್ಸ್ (11/2). 4ನೇ ಸ್ಥಾನ ಸ್ಪೇನ್‌ಗೆ ಲಭಿಸಿದೆ (6/1). ಉಳಿದಂತೆ ಆರ್ಜೆಂಟೀನಾ (9/1), ಬೆಲ್ಜಿಯಂ (11/1), ಇಂಗ್ಲೆಂಡ್ (16/1), ಪೋರ್ಚುಗಲ್ (25/1) 5ರಿಂದ 8ನೇ ಸ್ಥಾನ ಪಡೆದಿವೆ.
ಭಾರತದ ಬುಕ್ಕಿಗಳ ಲೆಕ್ಕಾಚಾರದಲ್ಲೂ ಬ್ರಝಿಲ್ ತಂಡಕ್ಕೆ ಅಗ್ರಸ್ಥಾನ (9/2). ಜರ್ಮನಿಗೆ 2ನೇ (5/1) ಮತ್ತು ಸ್ಪೇನ್‌ಗೆ 3ನೇ ಸ್ಥಾನ ನೀಡಿದ್ದಾರೆ (13/2). ಅನಂತರದ ಸ್ಥಾನದಲ್ಲಿ ಫ್ರಾನ್ಸ್ (7/1), ಆರ್ಜೆಂಟೀನಾ (10/1), ಬೆಲ್ಜಿಯಂ (11/1) ಮತ್ತು ಇಂಗ್ಲೆಂಡ್ (18/1) ತಂಡಗಳಿವೆ.