Advertisement

ಬವಣೆಗಳ ಪ್ರವಾಹದಲ್ಲಿ ಈಜಿದ ಈತ ವಿಶ್ವ ದಾಖಲೆಯ ಸರದಾರ

10:52 AM Oct 20, 2019 | Hari Prasad |

ಆತ ಏಷ್ಯಾನ್‌ ಗೇಮ್ಸ್‌ ಅಲ್ಲಿ ಆಡಿ ತನ್ನ ದೇಶದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂಬ ಕನಸು ಕಂಡವನ್ನು. ಅದಕ್ಕಾಗಿ ಹಗಲು ರಾತ್ರಿಯನ್ನದೇ ಶ್ರಮಿಸಿದ ಕ್ರೀಡಾಪಟು. ಕುಸ್ತಿ, ಕರಾಟೆ, ಕಿಕ್‌ ಬಾಕ್ಸಿಂಗ್‌, ಮಾರ್ಷಲ್‌ ಆಟ್ಸ್‌  ಪಂದ್ಯಾಟದಲ್ಲಿ  ರಾಜ್ಯ, ರಾಷ್ಟ್ರ  ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 50 ಕ್ಕೂ ಹೆಚ್ಚು  ಪದಕಳನ್ನು ಗಳಿಸಿದ ದೇಶಿಯ ಪ್ರತಿಭೆ ಶ್ಯಾಮ್‌ ಅಲಾಮ್‌.

Advertisement

ಮೂಲತ ಬಿಹಾರದ ರಾಥೌಸ್‌ ಎಂಬ ಪುಟ್ಟ  ಹಳ್ಳಿಯಲ್ಲಿ ಹುಟ್ಟಿ ಬೆಳೆದ ಶ್ಯಾಮ್‌ ಕುಟುಂಬದ ತುಂಬಾ ಕ್ರೀಡಾಪಟ್ಟುಗಳೇ ತುಂಬಿ ಹೋಗಿದ್ದರು. ಬಹುಷ ಈ ಕಾರಣಕ್ಕೋ ಎನೋ ಶ್ಯಾಮ್‌ಗೆ ಕೂಡ ಕ್ರೀಡೆ ಎಂದರೆ ಹುಚ್ಚು ಅಭಿಮಾನ. ಈ ಕ್ಷೇತ್ರದಲ್ಲಿ  ಸಂಪೂರ್ಣವಾಗಿ ತೊಡಗಿಸಿಕೊಂಡು ದೇಶವನ್ನು ಪ್ರತಿನಿಧಿಸಬೇಕೆಂಬ ಹಂಬಲ.

ಆದರೆ  ಅವನ ಕನಸು ಅರಳುವ ಮುನ್ನವೇ ಕಮರಿ ಹೋಹಿತ್ತು. ಏಷ್ಯಾನ್‌ ಗೇಮ್ಸ್‌ಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಶ್ಯಾಮ್‌ ತನ್ನ ಎಡ ಕಾಲಿನ ಸ್ವಾಧೀನ ಕಳೆದುಕೊಂಡಿದ್ದನು. ಚೆನ್ನಾಗಿ ಓಡಾಡಿಕೊಂಡು ಆಡಾಡಿಕೊಂಡಿದ್ದವನನ್ನು ವಿಧಿ ಒಮ್ಮೆಗೆ ಬವಣೆಗಳ ಪ್ರವಾಹಕ್ಕೆ  ತಳ್ಳಿತು.

ಪ್ರತಿದಿನ ಪ್ರಾಕ್ಟೀಸ್‌ ಮಾಡುವಾಗೆ ಅಂದು ಕೂಡ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಶ್ಯಾಮ್‌ ಇದಕ್ಕಿದ್ದ ಹಾಗೇ ಎಡ ಕಾಲಿನಲ್ಲಿ ನೋವು ಕಾಣಿಸಿತು. ತಕ್ಷಣ ಎಚ್ಚೆತ್ತ ಆತ ವೈದ್ಯರ ಬಳಿ ಓಡಾದ. ಅಲ್ಲಿ  ವೈದ್ಯರು ಈಗಾಲೇ ನೀವು ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಜತೆಗೆ ಆಪರೇಶನ್‌ ಅದ ನಂತರ 3-4 ತಿಂಗಳು ನಿಮ್ಮ ಎಡಕಾಲು ನಿಷ್ಕ್ರಿಯಗೊಳ್ಳುತ್ತದೆ ಮತ್ತೆ ನೀವು ಮೊದಲಿನಂತೆ ಸರಿಯಾಗುತ್ತೀರಾ ಎಂದು ಹೇಳಿದರು.

ಆದರೆ ದುರಾದೃಷ್ಟತವಶಾತ್‌ ಶಸ್ತ್ರ ಚಿಕಿತ್ಸೆ ಆಗಿ ತಿಂಗಳು ಕಳೆದರೂ ಶ್ಯಾಮ್‌ ಸರಿ ಹೋಗಲಿಲ್ಲ. ಇದಕ್ಕೆ  ಕಾರಣ ಏನಿರಬಹುದು ಹುಡುಕಿದಾಗ ಶ್ಯಾಮ್‌ಗೆ ಸಿಕ್ಕಿದು ಮತ್ತೂಂದು ಅಘಾತಕಾರಿ ಸುದ್ದಿ.

Advertisement

ಮೊದಲ ಅಘಾತವನ್ನು ಎದುರಿಸಿದವನಿಗೆ ಮತ್ತೂಂದು ಪೆಟ್ಟು ಬಿದ್ದಿತ್ತು. 2ನೇ ಬಾರಿಗೆ ಮಾಡಿಸಿದ ಎಂ.ಆರ್‌.ಐ. ವರದಿಯಲ್ಲಿ 3.5 ಎಂಎಂ ಗೆಡ್ಡೆ ಇದ್ದು, ಹಿಂದಿನ ಲ್ಯಾಬ್‌ ವರದಿಯನ್ನು ತಪ್ಪಾಗಿ ನೀಡಲಾಗಿದೆ ಎಂದು ವೈದ್ಯರು ಹೇಳಿದರು. ಪರಿಣಾಮ ಎರಡನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಬಾರಿ ಗೆಡ್ಡಯನ್ನು ಹೊರ ತೆಗೆಲಾಯಿತೇ ಹೊರತು ಪ್ಯಾರಾಪ್ಲೆಜಿಯಾ  ಸಮಸ್ಯೆಯಿಂದ ಸಂಪೂರ್ಣವಾಗಿ ಶ್ಯಾಮ್‌ ಮುಕ್ತನಾಗಲಿಲ್ಲ.

ಅಲ್ಲಿಗೆ ಶ್ಯಾಮ್‌ ಏಷ್ಯಾನ್‌ ಗೇಮ್ಸ್‌ ಕನಸು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಆದ ಅಘಾತದಿಂದ ಹೊರ ಬರಲು  ಶ್ಯಾಮ್‌ ಪ್ಯಾರಾಪ್ಲೆಜಿಕ್‌ ಪುನರ್ವಸತಿ ಕೇಂದ್ರಕ್ಕೆ ತೆರಳಿದನು.

ಬದುಕು ಬದಲಾಯಿಸಿದ ಜಾಗ
ಮನಶಾಂತಿ ಬೇಕು ಎಂದು ಪ್ಯಾರಾಪ್ಲೆಜಿಕ್‌ ಪುನರ್ವಸತಿ ಕೇಂದ್ರಕ್ಕೆ ಹೋಗಿದ್ದ ಶ್ಯಾಮ್‌ ಬದುಕಿನ ಆಯಾಮವೇ ಬದಲಾಯಿತು. ನಿಧಾನವಾಗಿ ಶ್ಯಾಮ್‌ ದೈಹಿಕ ಹಾಗೂ ಮಾನಸಿಕವಾಗಿ ಬಲಗೊಳ್ಳುತ್ತಾ ಹೋದರು. ಅವನಲ್ಲಿದ್ದ  ಕ್ರೀಡೆ ಆಸಕ್ತಿಗೆ ಮರುಜೀವ ಬಂದಿತ್ತು.

ಜೀವನದ ಆಯಾಮ ಬದಲಾಯಿಸಿದ ಬಾಲ್ಯದ ಹವ್ಯಾಸ
ಹೌದು, ಬಾಲ್ಯದಲ್ಲಿ ಹವ್ಯಾಸವಾಗಿ ರೂಢಿಸಿಕೊಂಡಿದ್ದ ಈಜುಗಾರಿಕೆ ಇಂದು ಶ್ಯಾಮ್‌ ನ ಬದುಕಿನ ದಿಕ್ಕನೇ ಬದಲಾಯಿಸಿದೆ. ಪ್ಯಾರಾಪ್ಲೆಜಿಕ್‌ ಪುನರ್ವಸತಿ ಕೇಂದ್ರದ ಜನರ ಬೆಂಬಲದಿಂದ ರಾಜ್ಯಮಟ್ಟದ ಪ್ಯಾರಾಪ್ಲೆಜಿಕ್‌ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ಪದಕವನ್ನು ಗೆದ್ದ  ಯುವಕ ಇಂದು ವಿಶ್ವ ದಾಖಲೆಯನ್ನು ಬರೆದಿದ್ದಾನೆ. ಜತೆಗೆ 2013 ರಲ್ಲಿ ನೌಕಪಡೆ ದಿನ ಅಂಗವಾಗಿ ನಡೆಸಿದ ಪ್ಯಾರಾಪ್ಲೆಜಿಕ್‌ ಈಜು ಸ್ಪರ್ಧೆಯಲ್ಲಿ ಕೇವಲ 1 ಗಂಟೆ 40 ನಿಮಿಷ, 28 ಸೆಕೆಂಡಿನಲ್ಲಿ  ಆರು ಕಿ.ಲೋ ಮೀಟರ್‌ ಅನ್ನು ಕ್ರಮಿಸಿದ್ದು, ಇದು ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಅಲ್ಲಿ ದಾಖಲಾಗಿದೆ. ಪ್ಯಾರಾಪ್ಲೆಜಿಕ್‌ ವಿಭಾಗದಲ್ಲಿ ವಿಶ್ವ ದಾಖಲೆ ಬರೆದ ಮೊದಲ ಈಜುಗಾರ ಎಂದು ಶ್ಯಾಮ್‌ ಗುರುತಿಸಿಕೊಂಡಿದ್ದಾನೆ.

ಅಂದು ದಾಖಲೆ ಬರೆಯಲು ಪ್ರಾರಂಭಿಸಿದವನು ಇಂದಿಗೂ ನಿಲ್ಲಿಸಿಲ್ಲ. ಸದ್ಯ 2020ರಲ್ಲಿ ಜಪಾನ್‌ ಅಲ್ಲಿ  ನಡೆಯಲ್ಲಿರುವ ಸಮರ್‌ ಪ್ಯಾರಾ ಒಲಂಪಿಕ್ಸ್‌ ಹಾಗೂ 2022 ಏಷ್ಯಾನ್‌ ಪ್ಯಾರಾ ಗೇಮ್ಸ್‌ ಗೆ ತಯಾರಿ ನಡೆಸುತ್ತಿರುವ ಶ್ಯಾಮ್‌ ದೇಶದ ಕೀರ್ತಿ ಪತಾಕೆಯನ್ನು ಉಂತುಗಕ್ಕೆ ಏರಿಸುವ ಗುರಿಯನ್ನಿಟ್ಟು ಕೊಂಡಿದ್ದಾನೆ.

ಜೀವನದಲ್ಲಿ  ಏನೇ ಎದುರಾದರು ಆತ್ಮಬಲ ಮನೋಬಲ ಒಂದಿದ್ದರೇ ಸಾಕು ಸಾವನ್ನು ಗೆಲ್ಲಬಹುದು ಎಂಬುದಕ್ಕೆ ಶ್ಯಾಮ್‌ ಜೀವಂತ ಉದಾಹರಣೆ.

– ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next