Advertisement

ಸಾವಯವ ಅಕ್ಕಿಗೆ ಬ್ರ್ಯಾಂಡ್‌ ಸ್ಪರ್ಶ!

10:33 PM Nov 06, 2020 | mahesh |

ಉಡುಪಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಸರಕಾರಿ ಶಾಲೆಯೊಂದು ಕೃಷಿ ಪ್ರವೃತ್ತಿ ಮಾಡುವ ಮೂಲಕ ಸಾವಯವ ಅಕ್ಕಿಗೆ ಬ್ರ್ಯಾಂಡ್‌ ಒದಗಿಸಲು ಮುಂದಾಗಿದೆ. ಆ ಶಾಲೆಯೇ ಉಡುಪಿ ನಗರದ ನಿಟ್ಟೂರು ಅನುದಾನಿತ ಪ್ರೌಢಶಾಲೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಈ ಶಾಲೆ ಈ ಬಾರಿ “ನಿಟ್ಟೂರು ಸ್ವರ್ಣಾ ಬ್ರ್ಯಾಂಡ್ ‘ ಅಕ್ಕಿಯನ್ನು ಮಾರುಕಟ್ಟೆಗೆ ತರಲಿದೆ. ಕೆಲವೇ ದಿನಗಳಲ್ಲಿ ಶಾಲೆಯ ಹಳೆವಿದ್ಯಾರ್ಥಿಗಳು ಈ ಬ್ರ್ಯಾಂಡ್ ‌ ಅಕ್ಕಿಯ ಯೋಜನೆಯ ಉಪಯೋಗ ಪಡೆದುಕೊಳ್ಳಲಿದ್ದಾರೆ.

Advertisement

ಲಾಕ್‌ಡೌನ್‌ನಲ್ಲಿ ಕೃಷಿ
ಕಳೆದ ಕೆಲವು ವರ್ಷಗಳಿಂದ ನಿಟ್ಟೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಆಸುಪಾಸಿ ನಲ್ಲಿರುವ ಗದ್ದೆಗಳಲ್ಲಿ ನಾಟಿ, ಕೊಯ್ಲು ಕಾರ್ಯಗಳಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿಯುತ್ತಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗದೇ ಇರುವುದರಿಂದ, ಶಾಲೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸನ್ನಿವೇಶ ಬಳಸಿಕೊಂಡು ಮುಖ್ಯೋಪಾಧ್ಯಾಯರಾಗಿದ್ದ ಮುರಳಿ ಕಡೆಕಾರ್‌ ಶಾಲೆಯ ಆಸುಪಾಸಿನ ಗ್ರಾಮಗಳಲ್ಲಿರುವ ಹಡಿಲು ಬಿದ್ದ ಗದ್ದೆಗಳಲ್ಲಿ ಬೇಸಾಯ ಮಾಡುವ ಯೋಜನೆ ರೂಪಿಸಿದ್ದರು. ಈ ಪ್ರಯತ್ನಕ್ಕೆ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ.

ಸಾವಯವ ಅಕ್ಕಿ ಬ್ರ್ಯಾಂಡ್‌
ಬೇಸಾಯಕ್ಕೆ ಸಾವಯವ ಗೊಬ್ಬರ ಮಾತ್ರ ಬಳಸಿರುವುದು ವಿಶೇಷ. ಎಲ್ಲ ಕಡೆಗಳಲ್ಲಿ ಬೆಳೆಸಿದ ಭತ್ತವನ್ನು ಹಳೆವಿದ್ಯಾರ್ಥಿಗಳು ಸಂಗ್ರಹಿಸಿ, ಮಿಲ್‌ ಮೂಲಕ ಅಕ್ಕಿ ಮಾಡುತ್ತಾರೆ. ಇದು ಪಾಲಿಶ್‌ ಮಾಡದ ಕಜೆ ಅಕ್ಕಿ. ಇದನ್ನು° 5, 10 ಮತ್ತು 25 ಕೆ.ಜಿ. ಚೀಲಗಳಲ್ಲಿ ನಿಟ್ಟೂರು “ಸ್ವರ್ಣಾ ಬ್ರ್ಯಾಂಡ್ ‌’ ಮೂಲಕ ಮಾರಾಟ ಮಾಡಲಾಗುತ್ತದೆ. ಬರುವ  ಆದಾಯದಲ್ಲಿ ಬೇಸಾಯದ ಖರ್ಚು ಕಳೆಯಲಾಗುತ್ತದೆ. ಖರ್ಚಿನಷ್ಟು ಆದಾಯ ಬಾರದಿದ್ದರೆ, ಹಳೆ ವಿದ್ಯಾರ್ಥಿಗಳು ಉಳಿದ ಮೊತ್ತ ಭರಿಸಲಿದ್ದಾರೆ. ಉಳಿತಾಯವಾದರೆ ಇದನ್ನು ಬೇಸಾಯಕ್ಕೆ ಗದ್ದೆಗಳನ್ನು ನೀಡಿದ ರೈತರಿಗೆ ನೀಡಲು ತೀರ್ಮಾ ನಿಸಲಾಗಿದೆ. ನಿಟ್ಟೂರು ಶಾಲೆಯ ಈ ಕೆಲಸ ನೋಡಿ ಸುತ್ತಲಿನ ಹಡಿಲು ಬಿಟ್ಟ ಜಮೀನಿನವರೂ ಈ ವರ್ಷ ಮುಂಗಾರಿನಲ್ಲಿ ಭತ್ತ ಬೆಳೆದಿದ್ದಾರೆ.

ಹೊಸ ಅನುಭವ
ಗದ್ದೆಯನ್ನು ಸ್ವಚ್ಛಗೊಳಿಸಿ ಬೇಸಾಯ ಮಾಡಲು ಈವರೆಗೆ 10-20 ಲ.ರೂ. ವೆಚ್ಚವಾಗಿದೆ. ಅದನ್ನು ಹಳೆ ವಿದ್ಯಾರ್ಥಿಗಳೇ ಭರಿಸಿದ್ದಾರೆ. ಐದು ಕಡೆ 50 ಎಕರೆ ಹಡಿಲು ಪ್ರದೇಶದಲ್ಲಿ ಭತ್ತದ ಬೇಸಾಯ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಕೊಯ್ಲು ಮುಗಿಯಲಿದೆ. ಅನಂತರ ಈ ಭತ್ತವನ್ನು
ಪಾಲಿಶ್‌ ಮಾಡದೇ ಅಕ್ಕಿ ತಯಾರಿಸಿ, “ನಿಟ್ಟೂರು ಸ್ವರ್ಣಾ ಬ್ರ್ಯಾಂಡ್‌’ನಲ್ಲಿ ಮಾರಾಟ ಮಾಡಲಿದ್ದೇವೆ.
-ಮುರಳಿ ಕಡೆಕಾರ್‌, ನಿವೃತ್ತ ಮುಖ್ಯೋಪಾಧ್ಯಾಯರು, ನಿಟ್ಟೂರು ಶಾಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next