ಇದು ಸುಮಾರು 58 ಸೆಂ.ಮೀ. ನಿಂದ 70 ಸೆಂ.ಮೀ ದೊಡ್ಡ ಇರುವುದು. ಇದಕ್ಕೆ ಗುಲಾಬಿ ಕೆಂಪು ಕಂದುಬಣ್ಣ ಮೈಯಲ್ಲಿದೆ. ತಲೆ ಸ್ವಲ್ಪ ತಿಳಿಬಣ್ಣ ಇದ್ದು ,ಕುತ್ತಿಗೆ ಮತ್ತು ಮೈ ಸೇರುವಲ್ಲಿಕುತ್ತಿಗೆ ಸುತ್ತ ಕಂದುಬಣ್ಣದ ಪಟ್ಟಿ ಇದೆ.
Advertisement
ಇದು ಅನ¤ಡಿಯಾ ಅಥವಾ ಅನ್ನೆರಿಫಾರುಸ್ ಕುಟುಂಬದ ಹಕ್ಕಿ. 110 ರಿಂದ 135 ಸೆಂಮೀ. ರೆಕ್ಕೆಯ ಅಗಲ ಇರುವುದು. ಕಿತ್ತಳೆ ಕಂದುಬಣ್ಣದ ದೇಹ, ಬಾಲ ಮತ್ತು ಹಾರುವಾಗ ರೆಕ್ಕೆಯಲ್ಲಿ ಕಪ್ಪು ಬಣ್ಣಕಾಣುವುದು. ಇದು ರೆಕ್ಕೆ ಮಡಚಿ ಕುಳಿತಾಗ ರೆಕ್ಕೆ ಮತ್ತು ಹೊಟ್ಟೆಯ ಗರಿಗಳ ನಡುವೆ ಬಿಳಿಬಣ್ಣ ಕಾಣುತ್ತದೆ. ಇದು ಸ್ಲಿಗ್ ಬಾತುವನ್ನು ನೆನಪಿಸುವುದು. ಎದೆಯ ಭಾಗ ಸ್ವಲ್ಪಕಂದುಗಪ್ಪು ಬಣ್ಣದಿಂದ ಕೂಡಿರುತ್ತದೆ. ಬೂದು ಬಣ್ಣದ ಚುಂಚು ತುದಿಯಲ್ಲಿ ಇತರ ಬಾತುಗಳಂತೆ ಸ್ವಲ್ಪ ಬಾಗಿದೆ. ಕಾಲು ಬೂದು ಬಣ್ಣಇದ್ದು, ಜಾಲಪಾದಇದೆ. ಕಾಲಿನ ಹಿಂಬದಿಯಲ್ಲಿ ಕೋಳಿಗಳಿಗಿರುವಂತೆ ಚಿಕ್ಕ ಬರಳಿದ್ದು ತುದಿಯಲ್ಲಿ ಉಗುರಿದೆ. ಇದು ಚಳಿಗಾಲದಲ್ಲಿ ಭಾರತ ಮತ್ತು ಭಾರತದ ನಡುಗಡ್ಡೆಗಳಿಗೆ ಬರುತ್ತವೆ. ದಕ್ಷಿಣ ಪೂರ್ವಯುರೋಪು, ಮಧ್ಯ ಏಷಿಯಾಗಳಲ್ಲಿ ಇವು ಮರಿಮಾಡುತ್ತವೆ. ಇದು ಬಹುದೂರ ವಲಸೆ ಬರುವ ಪಕ್ಷಿ. ಬಹು ಎತ್ತರದಲ್ಲಿ ಮಾಯ ಪರ್ವತ ಶ್ರೇಣಿಗಳನ್ನು ದಾಟಿ ಬರುವ ವಿಶೇಷ ಗುಣ ಹೊಂದಿವೆ. ಬಹು ಎತ್ತರದಲ್ಲಿ ಚಳಿ ಇದ್ದರೂ, ಕಡಿಮೆ ಆಮ್ಲಜಕ ತೆಗೆದುಕೊಂಡು ಹಾರಬಲ್ಲದು. ಅತಿ ಕಡಿಮೆ ಆಮ್ಲಜನಕ ಉಪಯೋಗಿಸುವ ಗುಣ ಇದರ ರಕ್ತದಲ್ಲಿದೆ. ಇದರ ಅಧ್ಯಯನ ಮತ್ತು ಇದು ವಲಸೆ ಬರುವ ಮಾರ್ಗ ಎತ್ತರ, ಒಂದು ಹಾರಿಕೆಯಲ್ಲಿ ನಿಲ್ಲದೇ ವಲಸೆಯಲ್ಲಿ ಬರುವ ಗುಣ. ಅನೇಕ ಪ್ರತಿರೋಧ, ಅಂದರೆ ಹವಾಮಾನ ವೈಪರಿತ್ಯ ಇತ್ಯಾದಿ ಎದುರಿಸುವ ಗುಣ-ಸೂಕ್ಷ್ಮತೆ ಇದರಲ್ಲಿದೆ. ಇದರ ಒಂದು ತಳಿ ಆಫ್ರಿಕಾದಲ್ಲೂ ಇದೆ. ಆದರೆ ದೊಡ್ಡದಾಗಿ ಹೂಂಕರಿಸುವಂತೆ ಅನುನಾಸಿಕ ಸ್ವರವನ್ನು ಅದು ಹೊಡಿಸುವ ವಿಶೇಷ ಗುಣ ಹೊಂದಿದೆ.
ಈ ಸಮಯದಲ್ಲಿ ಗುಡ್ಡಗಾಡಿನಕಲ್ಲು ಬಿರುಕು, ಮನೆಗಳ ಬಿರುಕು ಗೋಡೆಗಳಲ್ಲಿ ಗೂಡು ನಿರ್ಮಿಸುತ್ತವೆ. ಅಲ್ಲಿ 6-10 ಬಿಳಿ ಬಣ್ಣದ ಮೊಟ್ಟೆ ಇಡುತ್ತವೆ. ಹೆಣ್ಣು ಹಕ್ಕಿ ಕಾವುಕೊಟ್ಟು 28-30ದಿನಗಳಲ್ಲಿ ಮರಿ ಮಾಡುತ್ತವೆ.
Related Articles
ಇದು ಪ್ರೌಢಾವಸ್ಥೆ ತಲುಪುವಲ್ಲಿ 2 ವರ್ಷ ಬೇಕಾಗುವುದು. ಇದು ಚಳಿಗಾಲದಲ್ಲಿ ವಲಸೆ ಬರುವಾಗ, ಎತ್ತರದಲ್ಲಿ ಹಾರುವಾಗ ಇದರ ಹೃದಯ, ರಕ್ತ ಚಲನೆ, ರಕ್ತ ಕಣಗಳು ಕಡಿಮೆ ಆಮ್ಲಜನಕ ಇರುವ ಎತ್ತರದ ಪರ್ವತ ಪ್ರದೇಶದಲ್ಲಿ ಉಂಟಾಗುವ ಬದಲಾವಣೆ ಕುರಿತು ಅಧ್ಯಯನ ನಡೆಯಬೇಕಿದೆ.
Advertisement
ನೀರಿನಲ್ಲಿ ಈಜುವುದು, ಮುಳುಗಿ, ನೀರಿನ ಹೊಂಡದ ಅಡಿ ಇರುವ ಕವಳೆ, ಕಮಲ ಗಿಡಗಳ ಗದ್ದೆ ಸಹ ತಿನ್ನುತ್ತದೆ. ಇದು ಜೀವ ಬೆಳವಣಿಗೆ ಸರಪಳಿಯಲ್ಲಿ ಬಾತುಗಳಿಗಿಂತ ಮೇಲಿದೆ. ನೀರಿನಲ್ಲಿ ಈಜುವುದು. ನೀರಿನ ಅಕ್ಕಪಕ್ಕ ಇರುವ ಹಸಿರು ಹುಲ್ಲು, ಪೈರಿನ ಹೊಲದಲ್ಲಿ ಮೇಯುವುದು. ಆಯಾಸವಾದಾಗ ನೀರು ಸರೋವರಗಳಲ್ಲಿ ತೇಲಿ ವಿಶ್ರಾಂತಿ ಪಡೆಯುತ್ತವೆ. ಇದು ತನ್ನ ಜೀವನದ ಅರ್ಧ ಸಮಯ ಇಂತಹ ಭಾರತದ ಪ್ರದೇಶಗಳಲ್ಲಿ ಕಳೆಯುತ್ತವೆ.