ಹಸಿ ಮೆಣಸಿನ ಕಾಯಿ-2
ಬ್ರಾಹ್ಮಿ ಎಲೆ-1 ಕಪ್
ಉದ್ದಿನ ಬೇಳೆ-ಒಂದೂವರೆ ಚಮಚ
ಹುಣಿಸೇ ಬೀಜ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ತೆಂಗಿನಕಾಯಿ-ಅರ್ಧ ಕಪ್
ಸಾಸಿವೆ-ಸ್ವಲ್ಪ
ಒಣಮೆಣಸು-ಒಂದು
Advertisement
ಮಾಡುವ ವಿಧಾನ:ಎರಡು ಹಸಿ ಮೆಣಸಿನ ಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವತ್ಛಗೊಳಿಸಿದ ಒಂದು ಕಪ್ ಬ್ರಾಹ್ಮಿ ಎಲೆ (ತಿಮರೆ) ಹಾಕಿ, ಹುರಿದಿಟ್ಟುಕೊಂಡಿರುವ ಒಂದು ಚಮಚ ಉದ್ದಿನ ಬೇಳೆ ಹಾಕಿ, ರುಚಿಗೆ ತಕ್ಕಷ್ಟು ಹುಣಿಸೆ ಹಣ್ಣು,ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ತುರಿತುರಿಯಾಗಿ ರುಬ್ಬಿ. ಆನಂತರ ಅದಕ್ಕೆ ಅರ್ಧ ಕಪ್ ತೆಂಗಿನಕಾಯಿ ಹಾಕಿ ಪುನಃ ರುಬ್ಬಿ. ಸ್ವಲ್ಪ ತುರಿತುರಿಯಾಗಿ ಇರಲಿ. ಎಣ್ಣೆ ಬಿಸಿ ಮಾಡಿ ಸಾಸಿವೆ, ಒಣಮೆಣಸಿನ ತುಂಡು, ಉದ್ದಿನ ಬೇಳೆ ಹಾಕಿ ಹುರಿದು ಅದನ್ನು ರುಬ್ಬಿಟ್ಟುಕೊಂಡ ಚಟ್ನಿ ಮೇಲೆ ಹಾಕಿ. ಈ ಚಟ್ನಿಯನ್ನು ದೋಸೆ ಅಥವಾ ಅನ್ನದೊಂದಿಗೆ ಸವಿಯಬಹುದು.
ರವೆ: ಒಂದೂವರೆ ಕಪ್
ಮೊಸರು: 1 ಮುಕ್ಕಾಲು ಕಪ್
ಕರಗಿಸಿದ ಬೆಲ್ಲ: ಅರ್ಧ ಕಪ್
ಉಪ್ಪು: ಅರ್ಧ ಚಮಚ
ಅಡುಗೆ ಸೋಡಾ ಕಾಲು ಚಮಚ
Related Articles
ಒಂದು ಪಾತ್ರೆಯಲ್ಲಿ ಒಂದೂವರೆ ಕಪ್ ಆಗುವಷ್ಟು ರವೆಯನ್ನು ಸಣ್ಣ ಉರಿಯಲ್ಲಿ 3ರಿಂದ 4 ನಾಲ್ಕು ನಿಮಿಷಗಳವರೆಗೆ ಹುರಿಯಿರಿ. ಹುರಿದ ರವೆಯನ್ನು ಒಂದು ಪಾತ್ರೆಗೆ ಹಾಕಿ. ನಂತರ ಅದಕ್ಕೆ ಒಂದು ಕಪ್ ಮೊಸರನ್ನು ಹಾಕಿ. ರವೆ ಮತ್ತು ಮೊಸರನ್ನು ಚೆನ್ನಾಗಿ ಕಲಸಿಕೊಳ್ಳಿ. ಸುಮಾರು ಮುಕ್ಕಾಲು ಕಪ್ ಆಗುವಷ್ಟು ಮೊಸರನ್ನು ಹಾಕಿ ಪುನಃ ಚೆನ್ನಾಗಿ ಕಲಸಿಕೊಳ್ಳಿ. ಹಿಟ್ಟಿನ ಹದವನ್ನು ಪರಿಶೀಲಿಸಿ ಹಾಗೆಯೇ ಮೊಸರಿನ ಪ್ರಮಾಣವನ್ನು ಬದಲಿಸಿಕೊಳ್ಳಬಹುದು. ಅರ್ಧ ಕಪ್ ಕರಗಿಸಿ ಇಟ್ಟ ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಸಿ. (1 ಕಪ್ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅರ್ಧ ಕಪ್ ಆಗುವಷ್ಟು ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ಈ ಸಿರಪ್ ಅನ್ನು ಶೋಧಿಸಿ ಫ್ರಿಜ್‌ನಲ್ಲಿಟ್ಟುಕೊಂಡರೆ ಬೇಕಾದಾಗ ಬಳಸಬಹುದು).
ಹಿಟ್ಟಿಗೆ ಅರ್ಧ ಚಮಚ ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇಡ್ಲಿ ಪಾತ್ರೆಗಳಿಗೆ ಎಣ್ಣೆ ಉದ್ದಿಕೊಂಡು ಹಿಟ್ಟನ್ನು ಹಾಕಿ ದೊಡ್ಡ ಉರಿಯಲ್ಲಿ 15 ನಿಮಿಷಗಳವರೆಗೆ ಬೇಯಿಸಿ. ಈ ರುಚಿಕರವಾದ ಸಿಹಿ ಇಡ್ಲಿಗಳನ್ನು ಖಾರವಾದ ಚಟ್ನಿ ಜತೆ ಬಡಿಸಿ.
Advertisement
– ರುಚಿ ಮಂಗಳೂರು