Advertisement

Father: ನಮಗಾಗಿ ದುಡಿದ ನಾಯಕ ನಮ್ಮ ಜನಕ

03:44 PM Jun 24, 2024 | Team Udayavani |

ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಈ ಬದುಕು. ಅಪ್ಪನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ.  ಅಪ್ಪ ಅಮ್ಮನ ಪ್ರೀತಿ ಅತ್ಯಮೂಲ್ಯವಾದದ್ದು. ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವವರೇ ಅಪ್ಪ ಅಮ್ಮ. ಅಂತಹ ತಂದೆ ತಾಯಿಯರನ್ನು ನಾವು ಯಾವಗಲೂ ಗೌರವದಿಂದ ಕಾಣಬೇಕು.  ಅದು ನಮ್ಮ ಕರ್ತವ್ಯ ಕೂಡ ಹೌದು. ತಂದೆ, ತಾಯಿ ಎಂದರೆ ದೇವರ ಸ್ವರೂಪ.

Advertisement

ನಾವು ದೇವರನ್ನು ಎಷ್ಟು ಭಯ ಭಕ್ತಿಯಿಂದ ಗೌರವದಿಂದ ಪೂಜಿಸಿ ಆರಾದಿಸುತ್ತೇವೆಯೋ,  ಹಾಗೇಯೇ  ತಂದೆ ತಾಯಿಯರನ್ನೂ,  ಭಯ ಭಕ್ತಿಯಿಂದ ಪೂಜಿಸಿ, ಆರಾಧಿಸಿ ಗೌರವದಿಂದ ಕಾಣಬೇಕು. ತಂದೆ, ತಾಯಿ ಇಲ್ಲದ ಪ್ರಪಂಚವೇ ಶ್ಯೂನ.  ಪ್ರತಿಯೊಬ್ಬರ ಪಾಲಿಗೆ ಅಪ್ಪನೇ ಮೊದಲ ನಾಯಕ. ಅಪ್ಪ ಅಂದರೆ ದೇವರು,  ಅಪ್ಪ ಅಂದರೆ ಶಕ್ತಿ,  ಅಪ್ಪ ಅಂದರೆ ಆಕಾಶ, ಅಪ್ಪ ಅಂದರೆ ಸ್ನೇಹಿತ, ಅಪ್ಪ ಅಂದರೆ ಪ್ರೀತಿ, ಅಪ್ಪ ಅಂದರೆ ಬೆಳಕು,  ಅಪ್ಪ ಅಂದರೆ ಸಂತೋಷ ಹೀಗೆ ಎಷ್ಟು  ಅರ್ಥಗಳಿವೆ.

ಅಪ್ಪ ಮಕ್ಕಳನ್ನು ಬೈಯ್ಯುವುದಕ್ಕೆ ಮುಖ್ಯ ಕಾರಣ ಮಕ್ಕಳು ಯಾವ ತಪೂ³ ಮಾಡದಿರಲಿ ಎಂದು. ಮುಂದಿನ ಭವಿಷ್ಯ ಹಾಳಾಗದಿರಲಿ. ಸುಂದರ ಬದುಕು ಕಟಿcಕೊಳ್ಳಲು ಎಂಬ ಮೂಲ ಕಾರಣಕ್ಕಾಗಿ ಬೈದು ಬುದ್ದಿ ಹೇಳುತ್ತಾರೆ. ಬಾಹ್ಯವಾಗಿ ಕೋಪ ತೋರಿಸಿದರೂ ಅಂತರಂಗದಲ್ಲಿ ಮಾತ್ರ ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ. ಪ್ರತಿಯೊಬ್ಬ ತಂದೆ ತನ್ನಿಂದ ಸಾಧಿಸುವುದಕ್ಕೆ ಆಗದೇ ಇರುವುದನ್ನು ತನ್ನ ಮಕ್ಕಳಿಂದ ಸಾಧಿಸಿ ತೋರಿಸಲು ಕನಸು ಕಟ್ಟಿರುತ್ತಾರೆ.

ತನ್ನ ಕಷ್ಟ ಸುಖಗಳನ್ನು ಮರೆತು. ಮಕ್ಕಳ ಜೀವನ ಮತ್ತು ಸಂತೋಷಕ್ಕಾಗಿ ಹಗಲಿರುಳು ದುಡಿಯತ್ತಾರೆ.  ಮಕ್ಕಳು ಸಂತೋಷದಲ್ಲಿಯೇ ತನ್ನ ನೋವನ್ನು ಮರೆಯುತ್ತಾರೆ.  ಅಂತಹ ತ್ಯಾಗಮಯಿ ಜೀವಕ್ಕೆ ಸಲ್ಲಬೇಕಾದ ಗೌರವ ಮತ್ತು ಪ್ರೀತಿಯನ್ನು ಕೊಟ್ಟು ಅವರ ಮನದಲ್ಲಿ  ಆನಂದವನ್ನು ಸೃಷಿಸಬೇಕು. ನಮಗಾಗಿ ದುಡಿದು ದಣಿದ ದೇಹಕ್ಕೆ ಸದಾ ಆಸರೆಯಾಗಿ ಬದುಕಬೇಕು. ಅಂದಾಗ ಮಾತ್ರ ಬದುಕಿಗೆ ಅರ್ಥ ಮತ್ತು ಬದುಕಿದ್ದಕ್ಕೂ ಸಾರ್ಥಕ.  ವಿ.ಎಂ.ಎಸ್‌.

-ಗೋಪಿ

Advertisement

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next