ಬ್ರಹ್ಮಾವರ: ಕೊರಗಜ್ಜನಿಗೆ ಹರಕೆ ಹೊತ್ತ ಕೆಲವೇ ಹೊತ್ತಿನಲ್ಲಿ ಕಳೆದು ಹೋದ ಹಣ ಮರಳಿ ದೊರೆತ ಘಟನೆ ಆರೂರು
ಕುರುಡುಂಜೆಯಲ್ಲಿ ಸೋಮವಾರ ನಡೆದಿದೆ.
ಇದನ್ನೂ ಓದಿ:Largest Economy ಈ ವರ್ಷದ ವೇಳೆಗೆ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ವರದಿ
ಬ್ರಹ್ಮಾವರದ ಕುರುಡುಂಜೆಯ ಗದ್ದೆಯಲ್ಲಿ ಉಳುಮೆ ಮಾಡಲು ಬಂದ ಶಿವಮೊಗ್ಗದ ಗಣೇಶ್ ಎನ್ನುವ ಟ್ರ್ಯಾಕ್ಟರ್ ಚಾಲಕ ತಾನು ಸಂಪಾದನೆ ಮಾಡಿದ ಹಣವನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕಟ್ಟಿ ಟ್ರ್ಯಾಕ್ಟರ್‌ನಲ್ಲಿ ಇಟ್ಟುಕೊಂಡೆ ಉಳುಮೆ ಮಾಡುತ್ತಿದ್ದರು. ಕೆಲಸ ಮುಗಿಸಿ ನೋಡುವಾಗ ಹಣ ಕಳೆದು ಹೋಗಿತ್ತು. ಗಾಬರಿಗೊಂಡ ಅವರು ಊರಿನವರಿಗೆ ತಿಳಿಸಿ ಹತ್ತಾರು ಜನರೊಂದಿಗೆ ಹುಡುಕಿದರೂ ಗದ್ದೆಯಲ್ಲಿ ಹಣ ಸಿಗಲಿಲ್ಲ.
ಅದೇ ಸಮಯಕ್ಕೆ ಆಗಮಿಸಿದ ಕೊರಗಜ್ಜನ ಭಕ್ತ ಮಹೇಶ್ ಶೆಟ್ಟಿ ಅವರು ವಿಷಯ ತಿಳಿದು ಹಣ ದೊರೆತರೆ ಆರೂರು ಕುರುಡುಂಜೆ ಕೊರಗಜ್ಜನಿಗೆ ಕಳ್ಳು, ಬೀಡ, ಚಕ್ಕುಲಿಯೊಂದಿಗೆ ಆ ಹಣದಲ್ಲಿ ಒಂದು ಸಾವಿರ ನೀಡುವೆ ಎಂದು ಹರಕೆ ಹೊತ್ತು ಗದ್ದೆಗೆ ಇಳಿದೇ ಬಿಟ್ಟರು. 4 ಹೆಜ್ಜೆ ಹಾಕುತ್ತಲೇ ಅವರ ಕಾಲಿಗೆ ಕೆಸರಲ್ಲಿ ಸಿಕ್ಕಿತು 25 ಸಾವಿರ ಹಣದ ಕಟ್ಟು. ಇದು ಕೊರಗಜ್ಜನ ಪವಾಡವೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.